ಕುಂಭಶ್ರೀ ವಿದ್ಯಾಸಂಸ್ಥೆಯಲ್ಲಿ ಉಪಹಾರ ವ್ಯವಸ್ಥೆ: ರಾಜೇಂದ್ರ ಆಚಾರ್ಯ ಅವರಿಂದ ವಿಶೇಷ ಸಹಕಾರ​

1

ನಿಟ್ಟಡೆ – ವೇಣೂರು: ಬಜಿರೆಯ ರಾಜೇಂದ್ರ ಆಚಾರ್ಯ ಅವರು ಕುಂಭಶ್ರೀ ವಿದ್ಯಾಸಂಸ್ಥೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಉಪಹಾರದ ವ್ಯವಸ್ಥೆ ಕಲ್ಪಿಸುವ ಮೂಲಕ ಸಂಸ್ಥೆಯ ಮೇಲೆ ತಮಗಿರುವ ಅಭಿಮಾನ ಮತ್ತು ಸಹಕಾರವನ್ನು ವ್ಯಕ್ತಪಡಿಸಿದ್ದಾರೆ.

ರಾಜೇಂದ್ರ ಆಚಾರ್ಯ ಅವರ ಪತ್ನಿ ವಾಣಿ ರಾಜೇಂದ್ರ ಅವರು ಇದೇ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪುತ್ರಿ ಲಾವಣ್ಯ ಅವರು ಕುಂಭಶ್ರೀ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.​

ವಿದ್ಯಾಸಂಸ್ಥೆಯ ಮೇಲಿನ ಇವರ ಅಪಾರ ಅಭಿಮಾನದಿಂದ ಈ ಉಪಹಾರ ವ್ಯವಸ್ಥೆ ಮಾಡಲಾಗಿದ್ದು, ಭಟ್ ಕುಟುಂಬದವರ ಈ ಸಹಕಾರಕ್ಕೆ ಸಂಸ್ಥೆಯ ಆಡಳಿತ ಮಂಡಳಿಯು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.

1 COMMENT

LEAVE A REPLY

Please enter your comment!
Please enter your name here