ಸ್ಕೈ ಮಾರ್ಷಿಯಲ್ ಆರ್ಟ್ಸ್ ನಲ್ಲಿ ಕೊಯ್ಯೂರಿನ ಮೋಹನ್ ಪೂಜಾರಿ ಬಜ ರಾಷ್ಟ್ರ ಮಟ್ಟಕ್ಕೆ ಆಯ್ಕೆ

0

ಬೆಳ್ತಂಗಡಿ : ಸ್ಕೈ ಅಸೋಸಿಯೇಷನ್ ಆಫ್ ಕರ್ನಾಟಕ(ರಿ),ದಕ್ಷಿಣ ಕನ್ನಡ ಸ್ಕೈ ಅಸೋಸಿಯೇಷನ್ ಹಾಗೆಯೇ ಸ್ಕೈ ಫೆಡರೇಶನ್ ಆಫ್ ಇಂಡಿಯಾ ಇದರ ಸಹಭಾಗಿತ್ವದಲ್ಲಿ 19 ನೇ ರಾಜ್ಯ ಸ್ಕೈ ಚಾಂಪಿಯನ್ಶಿಪ್ ಹಾಗೂ ಆಯ್ಕೆ ಪ್ರಕ್ರಿಯೆಯು ಆ.30 ರಂದು ಬ್ರಹ್ಮ ಶ್ರೀ ಗುರುನಾರಾಯಣ ಸಭಾಭವನ ಮೂಡುಬಿದ್ರೆ ಇಲ್ಲಿ ನಡೆಸಲಾಗಿತ್ತು.

ಇದರಲ್ಲಿ ಕೊಯ್ಯೂರಿನ ಮೋಹನ್ ಪೂಜಾರಿ ಬಜ ಇವರು -62 kg ವಿಭಾಗದಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಗೆದ್ದು ಒಡಿಸ್ಸಾದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸ್ಕೈ ಚಾಂಪಿನ್ಶಿಪ್ ಆಯ್ಕೆ ಆಗಿ ಊರಿಗೆ ಹಾಗೂ ತಾಲೂಕಿಗೆ ಕೀರ್ತಿಯನ್ನು ತಂದಿರುತ್ತಾರೆ.

ಇವರು ಕೊಯ್ಯೂರಿನ ಸೇಸಪ್ಪ ಪೂಜಾರಿ ಹಾಗೂ ಬೇಬಿ ದಂಪತಿ ಪುತ್ರ.ತಾಲೂಕಿನ ಹಲವು ಶಾಲೆಗಳಲ್ಲಿ ಕರಾಟೆ ಮಾರ್ಷಿಯಲ್ ಆರ್ಟ್ಸ್ ನ ತರಬೇತಿಯನ್ನು ನೀಡುತ್ತಿದ್ದಾರೆ, ಹಾಗೆಯೇ ಇವರು ರೆನ್ಸಿ ನದೀಮ್ ಹಾಗೂ ಅಬ್ದುಲ್ ರಹಿಮಾನ್ ಇವರಿಂದ ತರಬೇತಿಯನ್ನು ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here