







ಉಜಿರೆ : ಅಕ್ಷಯ ನಗರ, ಪಾಳ್ಯ, ಕೋಡಿಬೆಟ್ಟು, ಕಡಂಬು ಮುಂತಾದ ಭಾಗದ ತೋಟಗಳಲ್ಲಿ ಆನೆ ಸಂಚಾರ ನಡೆಸಿದೆ.


ಬೆಳಗ್ಗಿನ ಜಾವ ತೋಟಕ್ಕೆ ತೆರಳಿದ ರೈತರು ಆನೆ ಕಂಡು ಬೆಚ್ಚಿಬಿದ್ದಿದ್ದಾರೆ.ಆನೆ ಕಂಡ ಕೂಡಲೇ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ್ದು, ಕೆಲವರು ಆನೆಯನ್ನು ಹಿಂಬಾಲಿಸಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ.
ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಜನರು ಜಾಗರೂಕರಾಗಿರಬೇಕು, ಆನೆಗೆ ಕಿರುಕುಳ ನೀಡಬಾರದು, ಗುಂಪಾಗಿ ಹೋಗಬಾರದು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ.









