ತೆಕ್ಕಾರು: ಮಸೀದಿ ಪೈಪ್‌ಲೈನ್‌ಗೆ ಹಾನಿ-ಐದು ಮಂದಿ ವಿರುದ್ಧ ಕೇಸ್ ದಾಖಲುಎರಡು ಪ್ರತ್ಯೇಕ ಪ್ರಕರಣ: ಉಪ್ಪಿನಂಗಡಿ ಠಾಣಾ ಪೊಲೀಸರಿಂದ ತನಿಖೆ ಚುರುಕು

0

ಬೆಳ್ತಂಗಡಿ: ತೆಕ್ಕಾರು ಗ್ರಾಮದ ಬಾಜಾರು ಬೈಲುಮೇಲು ಹಾಗೂ ಕೋಡಿಬೊಟ್ಟು ಬೈಲುಮೇಲು ಭಾಗದಲ್ಲಿ ನಡೆದ ಜಮೀನು ವಿವಾದ, ಮಸೀದಿ ತೋಟದ ನೀರಿನ ಪೈಪ್‌ಲೈನ್ ಹಾನಿ ಹಾಗೂ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ೫ ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಬಾಜಾರು ಬೈಲುಮೇಲು ಮನೆಯ ಸುಲೈಮಾನ್ (೪೫) ಅವರು ದೂರು ನೀಡಿದ್ದು ಆ.೨೫ರಂದು ಮಧ್ಯಾಹ್ನ ೩ರಿಂದ ೩.೦೫ರ ಸುಮಾರಿಗೆ ತೆಕ್ಕಾರು ಗ್ರಾಮದ ವಾರ್ಡ್ ನಂ.೩ರ ಬಾಜಾರು ಬಳಿ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ರಾತ್ರಿ ನಾನು ಅಸ್ವಸ್ಥನಾಗಿದ್ದ ಕಾರಣ ಆ.೨೭ರಂದು ಬೆಳಿಗ್ಗೆ ೧೧.೩೦ಕ್ಕೆ ತಡವಾಗಿ ಲಿಖಿತ ದೂರು ನೀಡಿರುವುದಾಗಿ ಸುಲೈಮಾನ್ ತಿಳಿಸಿದ್ದಾರೆ. ಕೋಡಿಬೊಟ್ಟು ಬೈಲುಮೇಲಿನ ಮಸೀದಿಗೆ ಸೇರಿದ ಕೃಷಿ ತೋಟಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಲೈನ್ ಅನ್ನು ಉzಶಪೂರ್ವಕವಾಗಿ ಕಡಿದು ಹಾನಿ ಮಾಡಲಾಗಿದೆ. ಇದರಿಂದ ಬೆಳೆಗಳಿಗೆ ನೀರಿಲ್ಲದೆ ಸಾವಿರಾರು ರೂಪಾಯಿ ನಷ್ಟವಾಗುವ ಸಾಧ್ಯತೆ ಇದೆ. ಅದೇ ಸ್ಥಳದ ಸಮೀಪದಲ್ಲಿರುವ ೧೧೦ ಹೈಟೆನ್ಷನ್ ವಿದ್ಯುತ್ ಟವರ್ ಕೆಳಭಾಗದಲ್ಲಿ ಅಕ್ರಮವಾಗಿ ಜೆಸಿಬಿ ತಂದು ಅಗೆತ ಮಾಡಲಾಗಿದೆ. ಇದು ಸರ್ಕಾರಿ ಆಸ್ತಿ ಮತ್ತು ಮೆಸ್ಕಾಂ ಇಲಾಖೆಯ ಆಸ್ತಿಗೆ ಹಾನಿ ಮಾಡುವ ಹಾಗೂ ಸಾರ್ವಜನಿಕ ಸುರಕ್ಷತೆಗೆ ಮಾರಕವಾಗುವ ಕೃತ್ಯವಾಗಿದೆ. ಈ ಬಗ್ಗೆ ಪ್ರಶ್ನಿಸಲು ಹೋದ ಮಸೀದಿ ಅಧ್ಯಕ್ಷರು ಮತ್ತು ಸಮಿತಿ ಸದಸ್ಯರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎಂದು ಸುಲೈಮಾನ್ ದೂರಿನಲ್ಲಿ ತಿಳಿಸಿದ್ದಾರೆ. ದೂರು ಸ್ವೀಕರಿಸಿದ ಉಪ್ಪಿನಂಗಡಿ ಠಾಣಾ ಪೊಲೀಸರು ಅಬ್ದುಲ್ ನಝೀರ್, ಅಬ್ದುಲ್ ಗಫೂರ್, ಬೀಫಾತುಮ್ಮ, ಬಿ.ಎಸ್.ಅರಿಸ್ ಮತ್ತು ರಯಾನತ್ ವಿರುದ್ಧ ಅಪರಾಧ ಕ್ರಮಾಂಕ ೧೧೨/೨೦೨೬ರಂತೆ ಬಿ.ಎನ್.ಎಸ್. ೩೫೨, ೧೧೫(೨) ೧೧೮(೧), ೩೫೧(೨), ೧೯೦ರಡಿ ಆ.೨೭ರಂದು ಪ್ರಕರಣ ದಾಖಲಿಸಿದ್ದಾರೆ.
ಮೊದಲು ಕೇಸ್ ದಾಖಲಾಗಿತ್ತು: ಜೆಸಿಬಿ ಮೂಲಕ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಕ್ರಮ ಪ್ರವೇಶ ಮಾಡಿ ಬೆದರಿಸಿ ನನಗೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ತೆಕ್ಕಾರು ಗ್ರಾಮದ ಬಾಜಾರು ಮನೆಯ ಸಾಬ ಬ್ಯಾರಿ ಎಂಬವರ ಪತ್ನಿ ಬೀಪಾತುಮ್ಮ(೭೫) ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಏಳು ಮಂದಿಯ ವಿರುದ್ಧ ಕೇಸು ದಾಖಲಾಗಿತ್ತು. ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಬಾಜಾರು ಎಂಬಲ್ಲಿ ಮಗ ಅಬ್ದುಲ್ ನಜೀರ್ ಎಂಬವವರ ಜೊತೆ ನಾನು ವಾಸವಾಗಿzನೆ. ಆ.೨೫ರಂದು ಮಧ್ಯಾಹ್ನ ೩:೩೦ ಗಂಟೆ ವೇಳೆಗೆ ಜೆಸಿಬಿ ಮೂಲಕ ಸರ್ವೆ ನಂಬ್ರ ೧೪೧/೩ಪಿ೧ ಮತ್ತು ೬೪/೧ಪಿ೧ರ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ಸಮಯ ನೆರೆ ಜಮೀನಿನ ಮಾಲೀಕರಾದ ಮಹಮ್ಮದ್ ಎಂಬವರ ಮಕ್ಕಳಾದ ಅಬೂಬಕ್ಕರ್ ತೌಸಿಫ್, ಸತ್ತಾರ್, ಸುಲೇಮಾನ್ ಮತ್ತು ಅವರ ಸಂಬಂಧಿಕರಾದ ಹ್ಯಾರೀಸ್, ಅಬ್ದುಲ್ ರಜಾಕ್, ಫರ್ದಾನ್ ಹಾಗೂ ಮಹಮ್ಮದ್‌ರವರ ಮಗಳ ಗಂಡ ಅಕ್ರಮ ಕೂಟ ಸೇರಿಕೊಂಡು `ನನ್ನ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ನೀವು ಇಲ್ಲಿ ಕೆಲಸ ಮಾಡಬಾರದು. ಈ ಜಾಗ ನಮ್ಮದು, ನೀವು ಇಲ್ಲಿ ಕೆಲಸ ಮಾಡಿದರೆ ಜಾಗೃತೆ. ನಿಮ್ಮನ್ನ ಮುಂದಕ್ಕೆ ನೋಡಿಕೊಳ್ಳುತ್ತೇನೆ’ ಎಂದು ಬೆದರಿಸಿದ್ದಾರೆ. ಅಲ್ಲದೆ ನನ್ನ ಮಕ್ಕಳಿಗೆ ಕೈಯಿಂದ ಹೊಡೆದು ಹಲ್ಲೆ ನಡೆಸುತ್ತಿದ್ದಾಗ ತಡೆಯಲು ಬಂದ ನನಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ. ಅದೇ ಸಮಯ ಸುಲೇಮಾನ್ ಎಂಬಾತ ಆತನ ಕೈಯಲ್ಲಿದ್ದ ಕೊಡೆಯಿಂದ ಹೊಡೆದು ಹಲ್ಲೆ ನಡೆಸಿದ್ದಾನೆ. ಆ ಸಮಯ ನಾನು ಹೊಂಡಕ್ಕೆ ಬಿದ್ದಿದ್ದು ಅದರ ಪರಿಣಾಮ ನನ್ನ ಬೆನ್ನಿಗೆ, ಸೊಂಟಕ್ಕೆ ಮತ್ತು ಕೈ ಕಾಲುಗಳಿಗೆ ನೋವುಂಟಾಗಿದೆ. ಈ ನೋವಿನಿಂದಾಗಿ ನಾನು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿzನೆ ಎಂದು ಬೀಪಾತುಮ್ಮ ಅವರು ದೂರಿನಲ್ಲಿ ತಿಳಿಸಿದ್ದರು. ದೂರು ಸ್ವೀಕರಿಸಿದ್ದ ಠಾಣಾಧಿಕಾರಿ ಗಜೇಂದ್ರ ನಾಯ್ಕ ಅವರು ಅಬೂಬಕ್ಕರ್, ತೌಸಿಫ್, ಸತ್ತಾರ್, ಸುಲೈಮಾನ್, ಹಾರಿಸ್, ಅಬ್ದುಲ್ ರಝಾಕ್ ಮತ್ತು ಫರ್ದಾನ್ ಅವರ ವಿರುದ್ಧ ಅಪರಾಧ ಕ್ರಮಾಂಕ ೧೧೧/೨೦೨೬ರಂತೆ ಬಿಎನ್‌ಎಸ್ ೧೧೫(೨), ೧೧೮(೧), ೩೫೧ ಮತ್ತು ೧೯೦ರಡಿ ಆ.೨೬ರಂದು ಪ್ರಕರಣ ದಾಖಲಿಸಿದ್ದರು. ಎರಡೂ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here