







ಬೆಳ್ತಂಗಡಿ :ಸಂತ ತೆರೇಸಾ ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಹ್ಯಾಂಡ್ಬಾಲ್ ಪಂದ್ಯಾಟ ಬೆಳ್ತoಗಡಿ ತಾಲೂಕು ಮಟ್ಟದ 14 ಮತ್ತು 17ರ ವಯೋಮಾನದ ಬಾಲಕ-ಬಾಲಕಿಯರ ಹ್ಯಾಂಡ್ಬಾಲ್ ಪ0ದ್ಯಾಟವು ಸಂತ ತೆರೇಸಾ ಪ್ರೌಢಶಾಲೆ, ಬೆಳ್ತಂಗಡಿಯಲ್ಲಿ ಆಗಸ್ಟ್ 28ರಂದು ನಡೆಯಿತು.


ಸಂತ ತೆರೇಸಾ ಪ್ರೌಢಶಾಲೆಯ ಫಲಿತಾಂಶ 17ರ ವಯೋಮಾನದ ಬಾಲಕರು : ಪ್ರಥಮ, 17ರ ವಯೋಮಾನದ ಬಾಲಕಿಯರು : ಪ್ರಥಮ, 14ರ ವಯೋಮಾನದ ಬಾಲಕರು : ಪ್ರಥಮ, 14ರ ವಯೋಮಾನದ ಬಾಲಕಿಯರು : ದ್ವಿತೀಯ, ಈ ನಾಲ್ಕು ತಂಡಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಆಡಳಿತ ಮಂಡಳಿ, ಶಾಲಾ ಮುಖ್ಯೋಪಾಧ್ಯಾಯಿನಿ ಲೀನಾ ಡಿಸೋಜ , ದೈಹಿಕ ಶಿಕ್ಷಕ ವಿನ್ಸೆಂಟ್ ಸಿಕ್ವೇರಾ, ಎಲ್ಲಾ ಶಿಕ್ಷಕರು ಹಾಗೂ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರು ಮತ್ತು ಸದಸ್ಯರು ಮಕ್ಕಳನ್ನು ಅಭಿನಂದಿಸಿದರು.









