






ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಬಳಂಜ ಕಳೆದ ಡಿಸೆಂಬರ್ 13-14 ರಂದು ಶ್ರೀ ಚಂದ್ರಶೇಖರ್ ಪಿ ಕೆ ಅವರ ಅದ್ಯಕ್ಷತೆಯಲ್ಲಿ ಹಾಗೂ ಸುರೇಶ್ ಶೆಟ್ಟಿ ಕುರೆಲ್ಯರವರ ಗೌರವಾಧ್ಯಕ್ಷತೆಯಲ್ಲಿ ಅಮೃತ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಕಳೆದ 9 ತಿಂಗಳಿನಿಂದ ಅನೇಕ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿದೆ. ಈಗಾಗಲೇ ಶಾಲೆಯನ್ನು ನವೀಕರಣಗೊಳಿಸಿದ್ದು ಮಕ್ಕಳ ಸುಗಮ ಸಂಚಾರಕ್ಕೆ ಶಾಲಾ ವಾಹನದ ವ್ಯವಸ್ಥೆಯನ್ನೂ ಆರಂಭಿಸಲಾಗಿದೆ.


ಶಾಲೆ ನಡೆದುಬಂದ ಹಾದಿಯ ನೆನಪುಗಳ ಹೊತ್ತಗೆ ಅಮೃತ ಸಿಂಧು ಈಗಾಗಲೇ ದಿನೇಶ್ ಪಿ ಕೆ ಯವರ ಸಂಪಾದಕತ್ವದಲ್ಲಿ ಸಿದ್ದವಾಗಿದ್ದು ಅಮೃತ ಸಮಾರೋಪ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿದೆ. ವಸಂತಾಭಿವಂದನಾ – ಧರ್ಮ ಸಾಕ್ಷಾತ್ಕಾರ.ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಶ್ರೀ ಕೆ ವಸಂತ ಸಾಲ್ಯಾನ್ ಹಾಗೂ ಮಾಜಿ ತಾಲೂಕ್ ಪಂಚಾಯತ್ ಸದಸ್ಯರಾದ ನಿವೃತ ಶಿಕ್ಷಕ ಹೆಚ್ ಧರ್ಣಪ್ಪ ಪೂಜಾರಿಯವರಿಗೆ ಬಳಂಜ ನಾಲ್ಕೂರು ಹಾಗೂ ತೆಂಕಕಾರಂದೂರು ಗ್ರಾಮಸ್ಥರ ಪರವಾಗಿ ಪೌರ ಸನ್ಮಾನ ಕಾರ್ಯಕ್ರಮವನ್ನು ವಿಶೇಷವಾಗಿ ಆಯೋಜಿಸಲಾಗುತ್ತಿದೆ. ಮಾನ್ಯರು ಕಳೆದ 5 ದಶಕಗಳಿಗೂ ಮೀರಿ ನೀಡಿದ ಗಣನೀಯ ಸೇವೆಯನ್ನು ಗುರುತಿಸಿ ಜೀವಮಾನ ಸಾಧನಾ ಪ್ರಶಸ್ತಿಯನ್ನು ಈ ಸಮಾರಂಭದಲ್ಲಿ ನೀಡುವರೇ ನಿರ್ಧರಿಸಲಾಗಿದೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜಾರವರು ವಹಿಸಲಿದ್ದಾರೆ. ಜಿಲ್ಲೆಯ ಮತ್ತು ರಾಜ್ಯದ ಹೆಸರಾಂತ ಗಣ್ಯರನ್ನು ಆಹ್ವಾನಿಸುವ ಯೋಜನೆಯಿದೆ ತದನಂತರ ರಾಜ್ಯದ ಹೆಸರಾಂತ ಕಲಾವಿದರಿಂದ ವಿಶೇಷ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಜರುಗಲಿದೆ ಎಂದು ಸಮಿತಿಯ ಪ್ರಧಾನ ಸಂಚಾಲಕರಾದ ಅಶ್ವಥ್ ಹೆಗ್ಡೆ ಬಳಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









