








ಕೊಕ್ಕಡ: ಮರಿಕೆ ನಿವಾಸಿ ಮಹಾಬಲ ನಾಯ್ಕ(77ವ.)ರವರು ಆ. 16 ರಂದು ಬೆಳಗ್ಗೆ ನಿಧನರಾದರು. ಅವರು ಮಾಸ್ತಿಕಲ್ಲುಮಜಲು ಶ್ರೀ ಪಿಲಿಚಾಮುಂಡಿ ದೈವಸ್ಥಾನದ ಟ್ರಸ್ಟಿಯಾಗಿ ಐವತ್ತು ವರ್ಷಗಳಿಗಿಂತಲೂ ಮೇಲ್ಪಟ್ಟು ದೈವಸ್ಥಾನದ ನೇಮೋತ್ಸವ ಮತ್ತು ಇತರ ಕಾರ್ಯಕ್ರಮಗಳಲ್ಲಿ ಜವಾಬ್ದಾರಿಯನ್ನು ನಿಭಾಯಿಸಿರುತ್ತಾರೆ. ಓಣಿತ್ತಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೆಸರರಾಗಿ, ಕೊಕ್ಕಡ ಸಹಕಾರಿ ಸಂಘದ ಮಾಜಿ ನಿರ್ದೇಶಕರಾಗಿ, ಕೊಕ್ಕಡ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನ, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಸಮಿತಿಗಳಲ್ಲೂ ಅಲ್ಲದೇ ಹಲವಾರು ದೇವಸ್ಥಾನ, ದೈವಸ್ಥಾನ, ಸಂಘ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸಿರುವ ಇವರು ಕೊಡುಗೈದಾನಿಯು ಆಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿ, ಬಂಧು ಬಳಗವನ್ನು ಅಗಲಿದ್ದಾರೆ.









