







ಅಳದಂಗಡಿ, ಆ. 15: ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನವೀಕರಿಸಿದ ಕಂಪ್ಯೂಟರ್ ಲ್ಯಾಬ್ ಹಾಗೂ ರೋಬೋಟಿಕ್ಸ್ ಪ್ರಯೋಗಾಲಯದ ಉದ್ಘಾಟನಾ ಸಮಾರಂಭ ನಡೆಯಿತು.



ಶಾಲೆಯ ಸಂಚಾಲಕರಾದ ರೆವ. ಫಾ. ಎಲಿಯಾಸ್ ಡಿ’ಸೋಜಾ ಅವರು ಕಂಪ್ಯೂಟರ್ ಕೊಠಡಿಯನ್ನು ಉದ್ಘಾಟಿಸಿದರು.ಮುಖ್ಯ ಅತಿಥಿ ವೈ.ಸಿ.ಎಸ್. ಡೈರೆಕ್ಟರ್ ಫಾ. ರೋಶನ್ ಡಿಕುನ್ಹಾ, ಮುಖ್ಯ ಶಿಕ್ಷಕಿ ಸಿಸ್ಟರ್ ಮೋಳಿ ಇಲ್ಲಿಕ್ಕ್ಯಲ್, ಪಿ.ಟಿ.ಎ. ಉಪಾಧ್ಯಕ್ಷ ಕುಶಲಪ್ಪ ಗೌಡ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಅಲ್ಫೋನ್ಸ್ ರೊಡ್ರಿಗಸ್, ಪಿ.ಟಿ.ಎ. ಸದಸ್ಯರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
7ನೇ ತರಗತಿಯ ಸನ್ವಿತ್ ಮತ್ತು ಜೋಯೆಲ್, 9ನೇ ತರಗತಿಯ ಹರ್ಷಿತ್ ಮತ್ತು ಯಜ್ಞೇಶ್ ಅವರು ತಯಾರಿಸಿದ ರೋಬೋಟಿಕ್ಸ್ ಮಾದರಿಗಳನ್ನು ಪ್ರದರ್ಶಿಸಿ, ಅವುಗಳ ಕಾರ್ಯವಿಧಾನವನ್ನು ಪ್ರಸ್ತುತಪಡಿಸಿದರು.









