







ಅಳದಂಗಡಿ : ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಸಂಚಾಲಕ ಫಾ. ಎಲಿಯಾಸ್ ಡಿ’ಸೋಜಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೈ.ಸಿ.ಎಸ್.ಡೈರೆಕ್ಟರ್ ಫಾ. ರೋಶನ್ ಡಿಕುನ್ಹಾ ,ಪಿ.ಟಿ.ಎ. ಉಪಾಧ್ಯಕ್ಷರಾದ ಕುಶಾಲಪ್ಪ ಗೌಡ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷರಾದ ಅಲ್ಫೋನ್ಸ್ ರೊಡ್ರಿಗಸ್ ಮತ್ತು ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಮೋಳಿ ಇಲ್ಲಿಕ್ಕ್ಯಲ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಆಶ್ರಿತ್ ಅವರು ಇಂಗ್ಲಿಷ್ನಲ್ಲಿ, ಯಜ್ಞೇಶ್ ಅವರು ಹಿಂದಿಯಲ್ಲಿ ಹಾಗೂ ಜ್ಞಾನವಿ ಅವರು ಕನ್ನಡದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಕುರಿತು ಭಾಷಣ ಮಾಡಿದರು.


ಮುಖ್ಯ ಅತಿಥಿ ಫಾ. ರೋಶನ್ ಡಿಕುನ್ಹಾ ಅವರು ಸ್ವಾತಂತ್ರ್ಯ ದಿನದ ಮಹತ್ವವನ್ನು ವಿವರಿಸುತ್ತಾ, ಸ್ವಾತಂತ್ರ್ಯವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ, ದೇಶವನ್ನು ಸ್ವಚ್ಛವಾಗಿಟ್ಟುಕೊಂಡು ರಾಷ್ಟ್ರದ ಗೌರವವನ್ನು ಕಾಪಾಡಬೇಕು ಹಾಗೂ ರಾಷ್ಟ್ರಧ್ವಜವನ್ನು ಗೌರವಿಸಬೇಕು ಎಂದು ತಿಳಿಸಿದರು.
ಅಧ್ಯಕ್ಷ ಫಾ. ಎಲಿಯಾಸ್ ಡಿ’ಸೋಜಾ ಅವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಹಾಗೂ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಗಳ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು, ಪೋಷಕರು, ಪಿ.ಟಿ.ಎ. ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿಗಳಾದ ನಿಶಾನ್ ಪಿರೇರಾ ಹಾಗೂ ಅಮ್ನಾ ಫಾತಿಮಾ ನೆರವೇರಿಸಿದರು. ಪವನ್ ನಾಯಕ್ ಹಾಗೂ ಆಶಿ ಸ್ವಾಗತಿಸಿದರು. ವೈಷ್ಣವಿ ವಂದನಾರ್ಪಣೆ ಸಲ್ಲಿಸಿದರು.ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.









