








ಶ್ರೀ ಮಂಜುನಾಥೇಶ್ವರ ಭಜನಾ ಮಂದಿರ ಮಂಜುಶ್ರೀನಗರ ಮೇಲಂತಬೆಟ್ಟು ಇದರ ವತಿಯಿಂದ 80ನೇ ವರ್ಷದ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಧ್ವಜರೋಹಣ ನಡೆಸಲಾಯಿತು. ಧ್ವಜರೋಹಣವನ್ನು ಹಿರಿಯ ಕೃಷಿಕರಾದ ಧರ್ಣಪ್ಪ ಸಪಲ್ಯ ನೂಜೆಲ್ ಇವರು ನೆರವೇರಿಸಿದರು ಮತ್ತು ಈ ಕಾರ್ಯಕ್ರಮದಲ್ಲಿ ಭಜನಾ ಮಂದಿರ ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಭಾಗವಹಿಸಿದರು.









