ಶ್ರೀ ವೀರಭದ್ರ ದೇವಸ್ಥಾನ ಲಿಂಗತ್ಯಾರು ಬಂಗಾಡಿಯಲ್ಲಿ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿ​

0

ಬಂಗಾಡಿ: ಇಂದಬೆಟ್ಟು ವಲಯದ ಇಂದಬೆಟ್ಟು ಕಾರ್ಯ ಕ್ಷೇತ್ರದ ಶ್ರೀ ವೀರಭದ್ರ ದೇವಸ್ಥಾನ, ಲಿಂಗತ್ಯಾರು ಬಂಗಾಡಿ ಇಲ್ಲಿ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ನಡೆಸಲಾಯಿತು.​

ದೇವಸ್ಥಾನದ ಆಡಳಿತ ಮುಖ್ಯಸ್ಥ ಬಿ. ವೀರಪ್ಪ ಮೊಯಿಲಿ, ಒಕ್ಕೂಟದ ಅಧ್ಯಕ್ಷ ವಿಶ್ವನಾಥ ಗೌಡ, ಪದ್ಮ ಜ್ಞಾನ ವಿಕಾಸದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು ಹಾಗೂ ನಮನ ತಂಡದ ಸದಸ್ಯರಾದ ಬೊಮ್ಮಯ್ಯ ಮೊಯಿಲಿ ಅವರು ಈ ದಿನದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಶ್ರಮದಾನ ಮಾಡಿದರು.​

ಕಾರ್ಯಕ್ರಮದ ಅಂತ್ಯದಲ್ಲಿ ಸೇವಾ ಪ್ರತಿನಿಧಿ ಶೈಲಾ ಅವರು ಉಪಸ್ಥಿತರಿದ್ದ ಎಲ್ಲರಿಗೂ ವಂದಿಸಿದರು.

LEAVE A REPLY

Please enter your comment!
Please enter your name here