ಮಲೆಬೆಟ್ಟು: ಜೇನು ಕೃಷಿಯಿಂದ ರೈತರ ಆರ್ಥಿಕ ಅಭಿವೃದ್ಧಿ ಸಾಧ್ಯ – ವಿನುತ ರಜತ್ ಗೌಡ ​

0

ಮಲೆಬೆಟ್ಟು: ಮಹಾಗಣಪತಿ ದೇವಸ್ಥಾನದಲ್ಲಿ ಪ್ರೇರಣಾ ಸಂಜೀವಿನಿ ಒಕ್ಕೂಟ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ಜೇನು ಕೃಷಿ ತರಬೇತಿ ಕಾರ್ಯಕ್ರಮವು ಸೋಮವಾರ (ಆಗಸ್ಟ್ 3, 2026) ಯಶಸ್ವಿಯಾಗಿ ಜರುಗಿತು.​

ಒಕ್ಕೂಟದ ಅಧ್ಯಕ್ಷರಾದ ವಿನುತ ರಜತ್ ಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂ.ಬಿ.ಕೆ. ಸಂಧ್ಯಾ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಗಣ್ಯರನ್ನು ಹಾಗೂ ರೈತರನ್ನು ಸ್ವಾಗತಿಸಿದರು.

​ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಪ್ರಕಾಶ್ ಜೋಶಿ ಶಿರ್ಲಾಲು ಅವರು ಜೇನು ಕೃಷಿಯ ಮಹತ್ವ, ಜೇನು ಪೆಟ್ಟಿಗೆಯ ಸಂಪೂರ್ಣ ಮಾಹಿತಿ ಹಾಗೂ ಕೃಷಿ ಮಾಡುವಾಗ ರೈತರು ಕಡ್ಡಾಯವಾಗಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ಸವಿಸ್ತಾರವಾಗಿ ವಿವರಿಸಿದರು.​

ಈ ತರಬೇತಿ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಬಿ.ಟಿ.ಎಂ. ನವನೀತ, ಎ.ಟಿ.ಎಂ. ಗಾಯತ್ರಿ, ಎಲ್.ಸಿ.ಆರ್.ಪಿ. ಶಾಶ್ವತ, ಪಶುಸಖಿ ಏಕಲತಾ ಹಾಗೂ ಕೃಷಿ ಸಖಿ ಭಾಗೀರಥಿ ಉಪಸ್ಥಿತರಿದ್ದರು. ಒಟ್ಟು 25ಕ್ಕೂ ಹೆಚ್ಚು ರೈತರು ಈ ತರಬೇತಿಯ ಪ್ರಯೋಜನ ಪಡೆದುಕೊಂಡರು. ಅಂತಿಮವಾಗಿ ಕೃಷಿ ಸಖಿ ಅವರು ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here