ಪಿಜತ್ತಕಟ್ಟೆ ಗಣೇಶೋತ್ಸವ ಸಮಿತಿಯ ವಿಜ್ಞಾಪನಾ ಪತ್ರ ಬಿಡುಗಡೆ

0

ಬೆಳ್ತಂಗಡಿ: 30ನೇ ವರ್ಷದ ಪಿಜತ್ತಕಟ್ಟೆ ಶ್ರೀ ಗಣೇಶೋತ್ಸವ ಬಹಳ ಅದ್ದೂರಿಯಿಂದ ಸೆ.14 ರಂದು ನಡೆಯಲಿದೆ. ಪಿಜತ್ತಕಟ್ಟೆ ಗಣಪತಿಯನ್ನು ರಥದಲ್ಲಿ ಕುಳ್ಳರಿಸಿ ವಿಸರ್ಜನೆ ಮಾಡುವ ಕ್ರಮ ಬಹಳ ವಿಶೇಷವಾಗಿರುವುದು ಮಾತ್ರವಲ್ಲದೇ ಇದು ಇಲ್ಲಿ ಮಾತ್ರ ಕಾಣಸಿಗುವಂತದ್ದು ಎಂದು ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಹೇಳಿದರು.

ಅವರು, ಪಿಜತ್ತಕಟ್ಟೆ ಶ್ರೀ ಗಣೇಶೋತ್ಸವ ಸಮಿತಿಯ ವಿಜ್ಞಾಪನಾ ಪತ್ರ ಬಿಡುಗಡೆ ಮಾಡಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಹಿರಿಯರಾದ ಜಯರಾಜ್, ಸುಹಾನ್ ‌ ಬಳ್ಳಾಲ್, ಪೊಸರಡ್ಕ ಬ್ರಹ್ಮಕುಂಭಾಭಿಷೇಕದ ಕಾರ್ಯಧ್ಯಕ್ಷ ಎಂ. ಎಸ್. ಪೂಜಾರಿ, ಸಮಿತಿಯ ಗೌರವಾಧ್ಯಕ್ಷ ಮಹಾಬಲ ಪೂಜಾರಿ, ಧರ್ಮಸ್ಥಳ ಯೋಜನಾಧಿಕಾರಿ ಶಶಿಕಲಾ, ಪ್ರಮುಖರಾದ ನವೀನ್, ಉದ್ಯಮಿ ಸುದರ್ಶನ್, ರಾಜು ಪೂಜಾರಿ ಕಾಶಿಪಟ್ಟ ಮೊದಲಾದವರು ಉಪಸ್ಥಿತರಿದ್ದರು. ಟಿವಿ ವರದಿಗಾರ ಆದಿತ್ಯ ಮರೋಡಿ ಸ್ವಾಗತಿಸಿ, ವಂದಿಸಿದರು.

ಒಂದೇ ತಾಯಿಯ ಮಕ್ಕಳಂತೆಕಾರ್ಯಕ್ರಮದಲ್ಲಿ ಭಾಗವಹಿಸಬೇಕು:30ನೇ ವರ್ಷದ ಪಿಜತ್ತಕಟ್ಟೆ ಶ್ರೀ ಗಣೇಶೋತ್ಸವ ಬಹಳ ಅದ್ಧೂರಿಯಿಂದ ನಡೆಯುತ್ತದೆ. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುರೇಶ್ ಅಂಚನ್ ಅವರ ತಂಡದವರು ಒಳ್ಳೆಯ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲು ಹೊರಟ್ಟಿದ್ದಾರೆ. ಅದು ಯಶಸ್ವಿ ಆಗಬೇಕಾದರೆ ಜಾತಿ ಭೇದ ಭಾವ ಮರೆತು ಒಂದೇ ತಾಯಿಯ ಮಕ್ಕಳಂತೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು.

ಸತೀಶ್ ಕಾಶಿಪಟ್ಟ, ಪೆರಾಡಿ ಪ್ಯಾಕ್ಸ್‌ ಅಧ್ಯಕ್ಷರು

ವಿಶಿಷ್ಟ ರೀತಿಯಲ್ಲಿ ಮಾಡಲಿದ್ದೇವೆ:ಸೆ.14 ರಂದು ಅಥರ್ವಶೀರ್ಷ ಗಣಯಾಗ ಮತ್ತು ಗಣೇಶೋತ್ಸವನ್ನು ವಿಜೃಂಭಣೆಯಿಂದ ಮಾಡಲಿದ್ದೇವೆ. ಇದರ ಜೊತೆಗೆ ರಾತ್ರಿ ‘ಪರಮಾತ್ಮ ಪಂಜುರ್ಲಿ’ ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ. 30ನೇ ಗಣೇಶೋತ್ಸವನ್ನು ಬಹಳ ವಿಶಿಷ್ಟ ರೀತಿಯಲ್ಲಿ ಮಾಡಲಿದ್ದೇವೆ. ಎಲ್ಲರೂ ಬಂದು ಈ ಗಣೇಶೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.-

ಸುರೇಶ್ ಅಂಚನ್, ಅಧ್ಯಕ್ಷರು, ಪಿಜತ್ತಕಟ್ಟೆ ಗಣೇಶೋತ್ಸವ ಸಮಿತಿ

LEAVE A REPLY

Please enter your comment!
Please enter your name here