







ಬೆಳ್ತಂಗಡಿ: ನೂತನ ತಹಶೀಲ್ದಾರ್ ಎಸ್.ಎನ್. ನರಗುಂದ ಅವರು ಜು.೯ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ತಹಶೀಲ್ದಾರ್ ಆಗಿದ್ದ ಪೃಥ್ವಿ ಸಾನಿಕಂ ಅವರು ಮೂಲ್ಕಿಗೆ ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಅವರ ಜಾಗಕ್ಕೆ ಮೈಸೂರು ಜಿಲ್ಲೆಯ ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಗ್ರೇಡ್-೧ ತಹಶೀಲ್ದಾರ್ ಆಗಿದ್ದ ಎಸ್.ಎನ್.ನರಗುಂದ ಅವರನ್ನು ನೇಮಕ ಮಾಡಿ ಸರಕಾರ ಜು.೨ರಂದು ಆದೇಶ ಹೊರಡಿಸಿತ್ತು. ಎಸ್.ಎನ್ ನರಗುಂದ ಅವರು ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಶಿರಸ್ತೇದಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ತಹಶೀಲ್ದಾರರಾಗಿ ಪದೋನ್ನತಿಗೊಂಡು ಮೈಸೂರಿನ ಯು.ಪಿ.ಓ.ಆರ್. ಕಚೇರಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ನಂತರ ಕೊಡಗು ಜಿಲ್ಲೆಯ ಸೋಮವಾರಪೇಟೆ, ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ, ಮೈಸೂರು ಜಿಲ್ಲೆಯ ಸಾಲಿಗ್ರಾಮ, ಹೆಚ್‌ಡಿ ಕೋಟೆ ಹಾಗೂ ಮೈಸೂರು ಜಿಲ್ಲೆಯ ಅಭಿವೃದ್ಧಿ ಪ್ರಾಧಿಕಾರದ ವಿಶೇಷ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿ ಇದೀಗ ಬೆಳ್ತಂಗಡಿಗೆ ಆಗಮಿಸಿದ್ದಾರೆ.


ಭ್ರಷ್ಟಾಚಾರ ವಿರುದ್ಧದ ಫಲಕ ನೀಡಿ ಸುದ್ದಿ ಬಳಗದಿಂದ ಸ್ವಾಗತ: ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ಸುದ್ದಿ ಬಿಡುಗಡೆ ಪತ್ರಿಕಾ ಬಳಗದ ವತಿಯಿಂದ ನೂತನ ತಹಶೀಲ್ದಾರ್ ಎಸ್.ಎನ್.ನರಗುಂದ ಅವರಿಗೆ ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ-ಉತ್ತಮ ಸೇವೆಗೆ ಪುರಸ್ಕಾರದ ಫಲಕ ನೀಡಿ ಸ್ವಾಗತಿಸಲಾಯಿತು. ವರದಿಗಾರರಾದ ಪ್ರಸಾದ್ ಮುಗುಳಿ, ಸುವಿರ್ ಜೈನ್ ಮತ್ತು ವನೀಶ್ ಬಂಗೇರ ಫಲಕ ನೀಡಿ ಸ್ವಾಗತಿಸಿದರು.









