ನಮಗೆ ಹೊಸ ಗ್ರಂಥಾಲಯ ಯಾವಾಗ ಸಿಗುತ್ತದೆ?: ಈ ಪ್ರಶ್ನೆಗೆ ಉತ್ತರ ಯಾರು ಕೊಡುತ್ತಾರೆ?೪ ವರ್ಷಗಳಿಂದ ನೆನೆಗುದಿಗೆ ಬಿದ್ದ ಸಾರ್ವಜನಿಕ ಗ್ರಂಥಾಲಯ ಕಾಮಗಾರಿ: ಶಿಥಿಲಾವಸ್ಥೆಯಲ್ಲಿ ಹಳೆಯ ಗ್ರಂಥಾಲಯ

0

ಬೆಳ್ತಂಗಡಿ: ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಆಗುತ್ತಿದೆ. ಆದರೆ ಜ್ಞಾನ ಭಂಡಾರ ಹೆಚ್ಚಿಸುವಂತಹ ಸರ್ಕಾರದ ದ.ಕ. ಜಿಲ್ಲಾ ಕೇಂದ್ರ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಬೆಳ್ತಂಗಡಿ ಶಾಖಾ ಗ್ರಂಥಾಲಯ ಮಾತ್ರ ಅನೇಕ ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿಯೇ ಇದೆ.
ಕುತ್ಯಾರು ದೇವಸ್ಥಾನದ ಬಳಿ ಜೂನಿಯರ್ ಕಾಲೇಜು ಮುಂಭಾಗ ಸುಂದರವಾದ ಹೈಟೆಕ್ ಗ್ರಂಥಾಲಯ ಆಗುತ್ತದೆ ಎಂದು ಕಳೆದ ೪ ವರ್ಷಗಳಿಂದ ತಾಲೂಕಿನ ಓದುಗರು ಕಾದು ಕುಳಿತz ಬಂತು. ಆದರೆ ಕಾಮಗಾರಿ ಮಾತ್ರ ಮುಂದೆ ಸಾಗುತ್ತಿಲ್ಲ.

ಸುಮಾರು ೯,೦೦೦ ಚದರ ಅಡಿ ವಿಸ್ತೀರ್ಣದಲ್ಲಿ ೨ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಗ್ರಂಥಾಲಯದ ಕಾಮಗಾರಿ ಕೆಲಸ ಶೇ. ೨೦ರಷ್ಟು ಮಾತ್ರ ಆಗಿದ್ದು ಅದು ಕೂಡ ಸ್ಥಗಿತಗೊಂಡಿದೆ.
ತಾಂತ್ರಿಕ ಅನುಮತಿ ವಿಳಂಬ ಹಾಗೂ ಅಗತ್ಯ ಅನುಮತಿಗಳ ಕೊರತೆಯಿಂದ ನಿರೀಕ್ಷಿತ ವೇಗದಲ್ಲಿ ಪೂರ್ಣಗೊಳ್ಳದೆ ಪಾಳು ಬಿದ್ದ ಕಟ್ಟಡದಂತಾಗಿದೆ.
ಇದರ ಶಿಲಾನ್ಯಾಸ ೨೦೧೩ರ ಜೂ.೧೮ರಂದು ಆಗಿತ್ತು.

ಹೊಸದಾಗಿ ನಿರ್ಮಾಣವಾಗಲಿರುವ ಎರಡಂತಸ್ತಿನ ಕಟ್ಟಡದಲ್ಲಿ ಏಕಕಾಲದಲ್ಲಿ ೩೫೦ ಮಂದಿ ಕುಳಿತುಕೊಳ್ಳುವ ವ್ಯವಸ್ಥೆ, ಗಾರ್ಡನಿಂಗ್, ಓದಲು ಅನುಕೂಲವಾಗುವಂತ ತ್ರಿಕೋನ ಆಕೃತಿಯ ಮಧ್ಯ ವೃತ್ತಾಕಾರದ ರಚನೆಯ ಓದುಗರಿಗೆ ಗಾಳಿ, ಬೆಳಕು ನೈಸರ್ಗಿಕವಾಗಿ ಸಿಗುವಂತಹ ವಿನ್ಯಾಸ, ಮಹಿಳೆಯರಿಗೆ, ಪುರುಷರಿಗೆ, ಅಂಗವಿಕಲಿರಿಗೆ ಪ್ರತ್ಯೇಕ ಶೌಚಾಲಯ ಹೀಗೆ ಹೈಟೆಕ್ ವ್ಯವಸ್ಥೆಗಳು ಇರಲಿದೆ ಎಂದು ಮಾಹಿತಿ ಇತ್ತು. ಶಾಸಕ ಹರೀಶ್ ಪೂಂಜರಿಗೆ ೨ ಕೋಟಿ ರೂ ಮೊತ್ತದ ಹೈಟೆಕ್ ಗ್ರಂಥಾಲಯವಾಗಬೇಕು ಎನ್ನುವ ಆಸೆ.
ಹಾಗಾಗಿ ೧ ಕೋಟಿ ಮೊತ್ತವನ್ನು ಸರ್ಕಾರದಿಂದ ಭರಿಸುವುದಾಗಿ ಶಾಸಕರು ಹೇಳಿದ್ದರು.

ಉಳಿದ ಮೊತ್ತವನ್ನು ಸಾರ್ವಜನಿಕ ಗ್ರಂಥಾಲಯ ಭರಿಸಿಬೇಕು ಎಂದು ಹೇಳಿದ್ದರು. ಕೇವಲ ಒಂದು ವರ್ಷದಲ್ಲಿ ಕಾಮಗಾರಿ ಮುಗಿದು ಓದುಗರ ಪಾಲಿಗೆ ಸಿಗುತ್ತದೆ ಎಂದು ಭಾವಿಸಲಾಗಿತ್ತು.
ಆದರೆ ಇದೀಗ ಕಾಮಗಾರಿ ಆರಂಭವಾಗಿ ೪ ವರ್ಷವಾಗುತ್ತಾ ಬಂದರೂ ಅದೇ ಹಳೆಯ ಶಿಥಿಲಾವಸ್ಥೆಯ ಗ್ರಂಥಾಲಯವನ್ನೇ ನಂಬಿಕೊಂಡು ಕೂರುವಂತಾಗಿದೆ.
ಬೆಳ್ತಂಗಡಿಯ ಹೃದಯಭಾಗದಲ್ಲಿಯೇ ಸುಮಾರು ೫೦ರಿಂದ ೬೦ ವರ್ಷದ ಹಿಂದೆ ಕೋರ್ಟ್ ಇದ್ದ ಕಟ್ಟಡದಲ್ಲಿ ನಂತರ ಲೋಕೋಪಯೋಗಿ ಇಲಾಖೆಯವರು ಕಾರ್ಯ ನಿರ್ವಹಿಸುತ್ತಿದ್ದರು.
ನಂತರ ಅದರಲ್ಲಿ ಸಾರ್ವಜನಿಕ ಗ್ರಂಥಾಲಯವನ್ನು ನಡೆಸಿಕೊಂಡು ಬರಲಾಗಿದೆ. ಗ್ಲಾಸ್ ಮುರಿದ ಕಿಟಕಿಗಳು, ಪ್ರತಿ ಮಳೆಗಾಲದಲ್ಲಿ ಸೋರುವ ಛಾವಣಿ ಜೊತೆ ಮಂಗಗಳು ಹೆಂಚಿನ ಛಾವಣಿ ಮೇಲೆ ಹಾರಿ ಅದರಿಂದಲೂ ಸಮಸ್ಯೆ.

ಹೀಗಾಗಿ ಪ್ರತಿ ವರ್ಷ ಛಾವಣಿಯ ತೇಪೆ ಕಾರ್ಯ ಗ್ರಂಥಾಲಯದ ಸಿಬ್ಬಂದಿಗಳು ಹರಸಾಹಸ ಪಟ್ಟು ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ, ಪೊಲೀಸ್, ವೈದ್ಯರಾಗಬೇಕೆಂಬ ಕನಸು ಹೊತ್ತವರಿಗೆ, ಸಾರ್ವಜನಿಕರಿಗೆ ಜ್ಞಾನ ಭಂಡಾರ ಹೆಚ್ಚಿಸಬಲ್ಲ ಅಮೂಲ್ಯ ಪುಸ್ತಕಗಳು ಹಾಳಾಗದಂತೆ ಜಾಗ್ರತೆ ವಹಿಸುತ್ತಿದ್ದಾರೆ.
ಹಳೆಯ ಕಟ್ಟಡವಾದರೂ ಅಲ್ಲಿನ ಲೈಬ್ರೆರಿಯನ್ ಹಾಗೆಯೇ ಸಿಬ್ಬಂದಿಗಳು ಅಚ್ಚುಕಟ್ಟಾಗಿ ಪುಸ್ತಕಗಳನ್ನು ಇಟ್ಟುಕೊಂಡಿದ್ದಾರೆ.
ಇದನ್ನು ಪ್ರತಿಯೊಬ್ಬರೂ ಮೆಚ್ಚಲೇ ಬೇಕು. ಆದರೆ ಇಲ್ಲಿರುವ ಪ್ರತಿಯೊಬ್ಬರಿಗೂ ಆದಷ್ಟು ಬೇಗ ಹೊಸ ಗ್ರಂಥಾಲಯ ಆಗಲಿ ಎನ್ನುವ ಆಸೆ ಇದೆ.

ಗ್ರಂಥಾಲಯ ಇಲಾಖೆಯಿಂದ ಅನುಮೋದನೆ ದೊರೆತಿಲ್ಲ: ತಾಲೂಕಿನ ಜನತೆಗೆ ಸುಂದರ ಹಾಗೂ ಸುಸಜ್ಜಿತ ಸಾರ್ವಜನಿಕ ಗ್ರಂಥಾಲಯ ನಿರ್ಮಿಸಬೇಕು ಎಂಬ ಉzಶದಿಂದ ಜೂನಿಯರ್ ಕಾಲೇಜು ಮುಂಭಾಗ ಸೂಕ್ತ ಜಾಗವನ್ನು ಗುರುತಿಸಿ ಅದನ್ನು ಮೀಸಲಿರಿಸುವ ಕೆಲಸವನ್ನು ಮಾಡಿದ್ದೆವು. ಮೊದಲ ಹಂತದಲ್ಲಿ ಗ್ರಂಥಾಲಯ ಇಲಾಖೆಯಿಂದ ೧೫ ಲಕ್ಷ ರೂ ಅನುದಾನ ತರಲಾಗಿತ್ತು. ಬಳಿಕ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ನಿಧಿಯಿಂದ ಸುಮಾರು ೪೦ ಲಕ್ಷ ರೂ ಅನುದಾನ ಪಡೆದು ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ನಿರ್ಮಿತಿ ಕೇಂದ್ರದ ಮೂಲಕ ಅನುಷ್ಠಾನಗೊಳಿಸಲಾಯಿತು. ೨೦೨೩ರಲ್ಲಿ ಬಿಜೆಪಿ ಸರ್ಕಾರದ ಕೊನೆಯ ಅವಧಿಯಲ್ಲಿ ಗ್ರಂಥಾಲಯ ಇಲಾಖೆಯಿಂದ ೫೦ ಲಕ್ಷ ರೂ ಅನುದಾನ ಬಿಡುಗಡೆಯಾಗಿತ್ತು. ಆದರೆ ಕಾಮಗಾರಿ ಆರಂಭಿಸಲು ಲೋಕೋಪಯೋಗಿ ಇಲಾಖೆಯ ಅಂದಾಜು ವೆಚ್ಚದ ಅನುಮೋದನೆ ಕಡ್ಡಾಯವಾಗಿದ್ದು ಆ ಪ್ರಸ್ತಾವನೆಗೆ ಇನ್ನೂ ಗ್ರಂಥಾಲಯ ಇಲಾಖೆಯಿಂದ ಅನುಮೋದನೆ ದೊರೆತಿಲ್ಲ. ಈ ತಾಂತ್ರಿಕ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ. ಅನುಮೋದನೆ ದೊರೆತ ಕೂಡಲೇ ೫೦ ಲಕ್ಷ ರೂ ವೆಚ್ಚದ ಕಾಮಗಾರಿಯನ್ನು ಆರಂಭಿಸಲು ಸಾಧ್ಯವಾಗಲಿದೆ. ಇದಲ್ಲದೆ ಯೋಜನೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಇನ್ನೂ ಸುಮಾರು ೧.೫ ಕೋಟಿ ರೂ ಹೆಚ್ಚುವರಿ ಅನುದಾನದ ಅಗತ್ಯವಿದೆ. ಈ ಕುರಿತು ಗ್ರಂಥಾಲಯ ಇಲಾಖೆ ಹಾಗೂ ಸಂಬಂಧಪಟ್ಟ ಸಚಿವಾಲಯಕ್ಕೆ ಈಗಾಗಲೇ ಮನವಿ ಸಲ್ಲಿಸಿzನೆ. ಸಾರ್ವಜನಿಕರ ಶೈಕ್ಷಣಿಕ ಮತ್ತು ಜ್ಞಾನವರ್ಧಕ ಹಿತದೃಷ್ಟಿಯಿಂದ ಕೈಗೆತ್ತಿಕೊಂಡಿರುವ ಈ ಗ್ರಂಥಾಲಯ ಯೋಜನೆಗೆ ಅಗತ್ಯ ಅನುದಾನವನ್ನು ಸರ್ಕಾರ ಶೀಘ್ರ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳ್ಳಲು ಸಹಕರಿಸಬೇಕು ಎಂದು ಸರ್ಕಾರವನ್ನು ವಿನಂತಿಸುತ್ತೇನೆ. – ಹರೀಶ್ ಪೂಂಜ ಶಾಸಕರು

ಹಣವಿಲ್ಲದೆ ಕಾಮಗಾರಿ ನಿಂತಿದೆ: ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿ ಸ್ವಲ್ಪ ಜಾಗ ಹೋಗುತ್ತದೆ ಎನ್ನುವ ಕಾರಣ ಬಿಟ್ಟರೆ ಹಳೆಯ ಕಟ್ಟಡದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ತಾಲೂಕಿನವರಿಗೆ ಅಂದಾಜು ೨ ಕೋಟಿ ರೂ ಮೊತ್ತದ ಹೈಟೆಕ್ ಗ್ರಂಥಾಲಯ ಬೇಕು ಎಂದು ಶಾಸಕ ಹರೀಶ್ ಪೂಂಜರ ಸ್ವ ಆಸಕ್ತಿಯಾಗಿತ್ತು. ಅದಕ್ಕಾಗಿ ೧ ಕೋಟಿ ರೂ ಅನುದಾನ ಕೊಡಿಸುವುದಾಗಿಯೂ ಹೇಳಿದ್ದರು. ಅದರಂತೆ ಅಂದಾಜು ಪಟ್ಟಿಯನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಕಳುಹಿಸಿದ್ದೆವು. ಗ್ರಂಥಾಲಯ ನಿಧಿಯಿಂದ ೧೫ ಲಕ್ಷ ರೂ ಖರ್ಚು ಮಾಡಿ ಕಾಮಗಾರಿ ಆರಂಭ ಮಾಡಿದ್ದೆವು. ಮೊದಲು ದ.ಕ. ನಿರ್ಮೀತಿ ಕೇಂದ್ರ ಕಾಮಗಾರಿ ಮಾಡುವುದೆಂದು ಅಂದಾಜಿಸಲಾಗಿತ್ತು. ಆದರೆ ಇಲಾಖೆಯವರು ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ಮುಂದುವರಿಸುವಂತೆ ಹೇಳಿದ್ದರು. ಆದರೆ ಪಿ.ಡಬ್ಲ್ಯು.ಡಿಯವರು ಕಾಮಗಾರಿ ಮಾಡಬೇಕು ಎಂದಾದರೆ ನಾವು ಒಂದೇ ಬಾರಿ ಪೂರ್ತಿ ಮೊತ್ತ ಪಾವತಿಸಬೇಕು. ಆದರೆ ನಮ್ಮಲ್ಲಿ ಅಷ್ಟು ಹಣವಿಲ್ಲದ ಕಾರಣ ಕಾಮಗಾರಿ ನಿಂತಿದೆ. ಒಂದು ವೇಳೆ ೧ ಕೋಟಿ ರೂ ಅನುದಾನ ಬಿಡುಗಡೆಯಾದರೆ ಗ್ರಂಥಾಲಯದ ಕಾಮಗಾರಿ ಮುಂದುವರಿಯುತ್ತದೆ. -ಮಮತಾ ರೈ.,ಮುಖ್ಯ ಗ್ರಂಥಾಲಯ ಅಧಿಕಾರಿ ,ಜಿಲ್ಲಾ ಕೇಂದ್ರ ಗ್ರಂಥಾಲಯ, ಮಂಗಳೂರು

LEAVE A REPLY

Please enter your comment!
Please enter your name here