







.ಬೆಳ್ತಂಗಡಿ: ಬ್ರಹ್ಮಶ್ರೀ ನಾರಾಯಣ ಗುರು ಮಂದಿರ, ಮಿತ್ತಬಾಗಿಲು ಮಲವಂತಿಗೆಯಲ್ಲಿ ಜು. 2 ರಂದು ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಸಮಾರಂಭ ಹಾಗೂ ಹೈ ಮಾಸ್ಕ್ ಲೈಟ್ ಉದ್ಘಾಟನಾ ಉದ್ಘಾಟನಾ ಸಮಾರಂಭವು ಜರುಗಿತು.
ಕಾರ್ಯಕ್ರಮವನ್ನು ಬೆಸ್ಟ್ ಫೌಂಡೇಷನ್ ಬೆಳ್ತಂಗಡಿ ಹಾಗೂ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ (ರಿ) ಮಿತ್ತಬಾಗಿಲು ಮಲವಂತಿಗೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪುಸ್ತಕಗಳನ್ನು ವಿತರಿಸಲಾಯಿತು.


ಮಂದಿರದ ಹೊರಾಂಗಣದಲ್ಲಿ ಮಾಣಿಬಾಲೆ ಬೈಲುವಾರು ಸಮಿತಿಯವರ ಸೇವಾ ರೂಪದ ನೂತನ ‘ಹೈ ಮಾಸ್ಕ್ ಲೈಟ್’ ಅನ್ನು ಉದ್ಘಾಟಿಸಲಾಯಿತು. ಕೋಟಿ ಚೆನ್ನಯ ಅರ್ಥ್ ಮೂವರ್ಸ್ ಕೊಲ್ಲಿಯ ನವೀನ್ ಪೂಜಾರಿ ಅವರ ಸೇವಾ ರೂಪದ ಹೊಸ ಲಾಕರ್ ಸೌಲಭ್ಯವನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಸ್ಟ್ ಫೌಂಡೇಷನ್ ಬೆಳ್ತಂಗಡಿಯ ಅಧ್ಯಕ್ಷ ರಕ್ಷಿತ್ ಶಿವರಾಂ ಹಾಗೂ ಬಂಗಾಡಿ ವ್ಯವಸಾಯಿಕ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಹರೀಶ್ ಸಾಲ್ಯಾನ್ ಮೋರ್ತಾಜೆ ಅವರು ಭಾಗವಹಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಅಭಿವೃದ್ಧಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.









