ಮಿತ್ತಬಾಗಿಲು ಮಲವಂತಿಗೆಯಲ್ಲಿ ಸಮಾಜಮುಖಿ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಹೈ ಮಾಸ್ಕ್ ಲೈಟ್ ಉದ್ಘಾಟನೆ

0

.ಬೆಳ್ತಂಗಡಿ: ಬ್ರಹ್ಮಶ್ರೀ ನಾರಾಯಣ ಗುರು ಮಂದಿರ, ಮಿತ್ತಬಾಗಿಲು ಮಲವಂತಿಗೆಯಲ್ಲಿ ಜು. 2 ರಂದು ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಸಮಾರಂಭ ಹಾಗೂ ಹೈ ಮಾಸ್ಕ್ ಲೈಟ್ ಉದ್ಘಾಟನಾ ಉದ್ಘಾಟನಾ ಸಮಾರಂಭವು ಜರುಗಿತು.​

ಕಾರ್ಯಕ್ರಮವನ್ನು ಬೆಸ್ಟ್ ಫೌಂಡೇಷನ್ ಬೆಳ್ತಂಗಡಿ ಹಾಗೂ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ (ರಿ) ಮಿತ್ತಬಾಗಿಲು ಮಲವಂತಿಗೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.​ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪುಸ್ತಕಗಳನ್ನು ವಿತರಿಸಲಾಯಿತು.​

ಮಂದಿರದ ಹೊರಾಂಗಣದಲ್ಲಿ ಮಾಣಿಬಾಲೆ ಬೈಲುವಾರು ಸಮಿತಿಯವರ ಸೇವಾ ರೂಪದ ನೂತನ ‘ಹೈ ಮಾಸ್ಕ್ ಲೈಟ್’ ಅನ್ನು ಉದ್ಘಾಟಿಸಲಾಯಿತು. ಕೋಟಿ ಚೆನ್ನಯ ಅರ್ಥ್ ಮೂವರ್ಸ್ ಕೊಲ್ಲಿಯ ನವೀನ್ ಪೂಜಾರಿ ಅವರ ಸೇವಾ ರೂಪದ ಹೊಸ ಲಾಕರ್ ಸೌಲಭ್ಯವನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.​

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಸ್ಟ್ ಫೌಂಡೇಷನ್ ಬೆಳ್ತಂಗಡಿಯ ಅಧ್ಯಕ್ಷ ರಕ್ಷಿತ್ ಶಿವರಾಂ ಹಾಗೂ ಬಂಗಾಡಿ ವ್ಯವಸಾಯಿಕ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಹರೀಶ್ ಸಾಲ್ಯಾನ್ ಮೋರ್ತಾಜೆ ಅವರು ಭಾಗವಹಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಅಭಿವೃದ್ಧಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here