






ನಾರಾವಿ: ತುಳಸಿ ಕ್ರಿಯೇಷನ್ಸ್ ನಾರಾವಿ ತಂಡವು ಇತಿಹಾಸ ಪ್ರಸಿದ್ಧ ನಾರಾವಿ ಶ್ರೀ ಸೂರ್ಯನಾರಾಯಣ ದೇವರ ಕುರಿತಾದ ನೂತನ ಭಕ್ತಿಗೀತೆಯನ್ನು ಹೊರತರಲು ಸಿದ್ಧತೆ ನಡೆಸಿದೆ. ಈ ವಿಶೇಷ ಭಕ್ತಿಗೀತೆಯ ಪೋಸ್ಟರ್ ಬಿಡುಗಡೆಯು ಇಂದು ಸಂಜೆ ನೆರವೇರಲಿದೆ.
ಈ ಭಕ್ತಿಗೀತೆಯು ಜುಲೈ 16, 2026ರ ಗುರುವಾರದಂದು ನಾರಾವಿಯ ಶ್ರೀ ಕ್ಷೇತ್ರದಲ್ಲಿ ವಿಧ್ಯುಕ್ತವಾಗಿ ಬಿಡುಗಡೆಗೊಳ್ಳಲಿದೆ. ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಯುತ ಕೃಷ್ಣ ತಂತ್ರಿಯವರು ಈ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಶುಭಾಶೀರ್ವಾದ ನೀಡಲಿದ್ದಾರೆ.


ಈ ಭಕ್ತಿಗೀತೆಯನ್ನು ಯಶಸ್ವಿಯಾಗಿ ರೂಪಿಸಲು ಹಲವು ಪ್ರತಿಭೆಗಳು ಶ್ರಮಿಸಿದ್ದಾರೆ
ಸುಜಿತ್ ಎಸ್. ನಾರಾವಿಗಾಯನ ಹಾಗೂ ಅಭಿನಯ: ರಶ್ವಿ ಆರ್. ನಾರಾವಿಧ್ವನಿ ಮುದ್ರಣ: ಯಶವಂತ್ ಕುಲಾಲ್ ಗಂಜಿಮಠಛಾಯಾಗ್ರಹಣ ಮತ್ತು ಸಂಕಲನ: ದೀಪು ಕಾರ್ಲಪ್ರಚಾರ ಕಲೆ: ಜಿತೇಶ್ ಸರಪಾಡಿಪ್ರಾಯೋಜಕರು: ರಾಮು ಪಿ. ಮತ್ತು ಪ್ರಭಾ, ರಶ್ವಿ ಮತ್ತು ರಿಯಾ ಈ ಭಕ್ತಿಗೀತೆಯು ಶ್ರೀ ಸೂರ್ಯನಾರಾಯಣ ದೇವಸ್ಥಾನ, ನಾರಾವಿ ಇವರ ಸಂಪೂರ್ಣ ಸಹಕಾರ ಮತ್ತು ಆಶೀರ್ವಾದದೊಂದಿಗೆ ನಿರ್ಮಾಣಗೊಂಡಿದೆ.









