ಕಾಶಿ ಸದನ ಮನೆ ಹಸ್ತಾಂತರ: ಬಂಟರ ಸಂಘದ ವಸತಿ ಯೋಜನೆಯ ಮತ್ತೊಂದು ಕನಸು ನನಸು

0

ಬೆಳ್ತಂಗಡಿ, ಜು. 8: ಬಂಟರ ಯಾನೆ ನಾಡವರ ಸಂಘ (ರಿ.) ಬೆಳ್ತಂಗಡಿ, ಬಂಟರ ವಲಯ ಸಮಿತಿ ನಾರಾವಿ ಹಾಗೂ ಕೊಕ್ರಾಡಿ ಬಂಟರ ಗ್ರಾಮ ಸಮಿತಿಯ ಸಹಯೋಗದಲ್ಲಿ, ಬಂಟರ ಸಂಘದ ಗೌರವ ಮಾರ್ಗದರ್ಶಕರಾದ ಶಶಿಧರ್ ಶೆಟ್ಟಿ ಬರೋಡ ಅವರ ಮಾತೃಶ್ರೀ ದಿವಂಗತ ಕಾಶಿ ಶೆಟ್ಟಿಯವರ ಸ್ಮರಣಾರ್ಥ ರೂಪಿಸಲಾದ ವಸತಿ ಯೋಜನೆಯಡಿ ನಿರ್ಮಿಸಲಾದ “ಕಾಶಿ ಸದನ” ನೂತನ ಮನೆಯನ್ನು ಕೊಕ್ರಾಡಿ ಗ್ರಾಮದ ಶ್ರೀಮತಿ ಗಿರಿಜಾ ಶೆಟ್ಟಿಯವರಿಗೆ ಜು. 8ರಂದು ಹಸ್ತಾಂತರಿಸಲಾಯಿತು.

ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ ಅವರು ನೂತನ ಮನೆಯನ್ನು ಫಲಾನುಭವಿಗೆ ಹಸ್ತಾಂತರಿಸಿದರು. ರಾಜೇಶ್ ಶೆಟ್ಟಿ ನವಶಕ್ತಿ ಅವರು ನಾಮಫಲಕವನ್ನು ಅನಾವರಣಗೊಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ಬಂಟರ ಮಾತೃ ಸಂಘದ ಸಂಚಾಲಕ ಜಯರಾಮ್ ಭಂಡಾರಿ, ಬಂಟರ ಸಂಘದ ನೂತನ ಅಧ್ಯಕ್ಷ ಪ್ರಕಾಶ್ ಶೆಟ್ಟಿ ನೊಚ್ಚ, ಉಪಾಧ್ಯಕ್ಷ ರಾಜು ಶೆಟ್ಟಿ ಬೆಂಗತ್ಯಾರು, ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಕೋಶಾಧಿಕಾರಿ ವಸಂತ್ ಶೆಟ್ಟಿ ಶ್ರದ್ಧಾ, ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಸುಲ್ಕೇರಿ, ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಅಜಿತ್ ಶೆಟ್ಟಿ ಕೊರ್ಯಾರು, ಉಪಾಧ್ಯಕ್ಷ ಜಯಂತ್ ಶೆಟ್ಟಿ ಕುಂಟಿನಿ, ವಿಠಲ್ ಶೆಟ್ಟಿ ಕೊಲ್ಲೊಟ್ಟು, ಮಂಜಯ್ಯ ಶೆಟ್ಟಿ ಮಡಂತ್ಯಾರು, ಸದಾನಂದ ಶೆಟ್ಟಿ ಪೆರಾಡಿ, ಬಂಟರ ವಲಯ ಸಮಿತಿ ನಾರಾವಿ ಅಧ್ಯಕ್ಷ ರಾಜೇಶ್ ಶೆಟ್ಟಿ ಪೆರಾಡಿ, ಕೊಕ್ರಾಡಿ ಬಂಟರ ಗ್ರಾಮ ಸಮಿತಿ ಅಧ್ಯಕ್ಷ ಪ್ರದೀಪ್ ವಿ. ಶೆಟ್ಟಿ, ಗೌರವಾಧ್ಯಕ್ಷ ರಾಜು ಶೆಟ್ಟಿ ಕೊಕ್ರಾಡಿ, ಕಾರ್ಯದರ್ಶಿ ವಿಕಿತ್ ಶೆಟ್ಟಿ ಸೇರಿದಂತೆ ಆನಂದ ಶೆಟ್ಟಿ, ನವೀನ್ ಶೆಟ್ಟಿ, ಸುರೇಶ್ ಶೆಟ್ಟಿ ಸೂರ್ಯ, ವಿಶ್ವನಾಥ್ ಶೆಟ್ಟಿ ಸುಲ್ಕೇರಿ, ಸುರೇಶ್ ಶೆಟ್ಟಿ ಪೋನ್ನೆಮರಡ, ದೀಪಕ್ ಶೆಟ್ಟಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here