






ಅಳದಂಗಡಿ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ BC ಟ್ರಸ್ಟ್ ಗುರುವಾಯನಕೆರೆ ಯಾಂತ್ರಿಕೃತ ಭತ್ತ ಕೃಷಿಗೆ ಅಳದಂಗಡಿ ಅರಮನೆ ಅರಸರಾದ ತಿಮ್ಮಣ್ಣ ಅರಸರಾದ ಡಾಕ್ಟರ್ ಪದ್ಮ ಪ್ರಸಾದ್ ಅಜಿಲರು ಸಸಿ ಮಡಿ ಹಸ್ತಾಂತರ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಬತ್ತದ ಕೃಷಿಯಲ್ಲಿ ಯಂತ್ರಿಕರಣಕ್ಕೆ ಹೆಚ್ಚಿನ ಮಹತ್ವವನ್ನು ದೊರೆಯುತ್ತಿದ್ದು ಭತ್ತ ಬೆಳೆಯುವ ರೈತರು ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಬತ್ತ ಬೇಸಾಯವನ್ನು ಮಾಡಿದರೆ ಸಮಯ ಉಳಿತಾಯವಾಗುವುದು ಹೆಚ್ಚಿನ ಆದಾಯವನ್ನು ಗಳಿಸಲು ಸಹಕಾರಿಯಾಗಿದೆ ಎಂದು ಶುಭ ಹಾರೈಸಿದರು.



ಕಾರ್ಯಕ್ರಮದಲ್ಲಿ ಬಡಗ ಕಾರಂದೂರು ಒಕ್ಕೂಟದ ಅಧ್ಯಕ್ಷ ಹರೀಶ್ ಶಾಲಿಯಾನ್ ಕೃಷಿ ಮೇಲ್ವಿಚಾರಕ ಕೃಷ್ಣ,ವಲಯದ ಮೇಲ್ವಿಚಾರಕ ಯಶೋಧ M, ಹಾಗೂ chsc ಮೆನೇಜರ್ ಹರೀಶ್, ನಿಕಟಪೋರ್ವ ಅಧ್ಯಕ್ಷ ಮಂಜುನಾಥ ಆಚಾರ್ಯ, ಪ್ರಜಿತ್,ರಘು, ಬುಬಾ ಮೊಲ್ಯ, ಗಣೇಶ್, ಹರೀಶ್, ಶಾರದಾ, ಕಲ್ಯಾಣಿ, ಸೇವಾಪ್ರತಿನಿಧಿ, ಶುಭ ಹರೀಶ್ ರೈ, ಪೂರ್ಣಿಮಾ,, ಹರೀಣಾಕ್ಷಿ,ನಾಟಿ ಯಂತ್ರ ಚಾಲಕರು ಸುಮನ ಸ್ಥಳೀಯ ರೈತರು ಉಪಸ್ಥಿತರಿದ್ದರು.









