






ಮಾಲಾಡಿ: ಜೂ 28 ಸೊಣoದೂರು ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮ ನಡೆಯಿತು. ಪೋಲಿಯೋ ಮುಕ್ತ ಭಾರತ ಆಗಬೇಕಾದರೆ ಮೊದಲು ಎಲ್ಲಾ ಹಳ್ಳಿಗಳಲ್ಲೂ ಪೋಲಿಯೋ ಲಸಿಕೆ ನೀಡಬೇಕು. ಅದಕ್ಕಾಗಿ ಪೋಲಿಯೋ ಮುಕ್ತ ಸೋಣಂದೂರು ಮಾಡುವ ಸಲುವಾಗಿ ಸೋಣಂದೂರು ವ್ಯಾಪ್ತಿಯ 0-5 ವರ್ಷದ ಎಲ್ಲಾ ಮಕ್ಕಳಿಗೆ ಲಸಿಕೆಯನ್ನು ನೀಡಲಾಯಿತು.


ಪೋಷಕರಿಗೆ ಪೋಲಿಯೋ ಕಾಯಿಲೆ ಬಗ್ಗೆ, ಲಸಿಕೆ ಯ ಮಹತ್ವದ ಬಗ್ಗೆ ಆಶಾ ಕಾರ್ಯಕರ್ತೆಯಾದ ಶಾಹೀರಾ ಬಾನು ಮಾಹಿತಿ ನೀಡಿದರು. ಎಲ್ಲಾ ಪುಟಾಣಿಗಳಿಗೆ ಅಂಗನವಾಡಿ ಕಾರ್ಯಕರ್ತೆ ಶಾಂತಿ ಹಾಗೂ ಆಶಾ ಕಾರ್ಯಕರ್ತೆ ಶಾಹೀರ ಬಾನು ಪೋಲಿಯೋ ಲಸಿಕೆಯ 2 ಹನಿ ನೀಡಿದರು.









