ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಮಡಂತ್ಯಾರಿನಲ್ಲಿ ಶಾಲಾ ಸಂಸತ್ತು ಉದ್ಘಾಟನೆ

0

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಮಡಂತ್ಯಾರಿನಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತುಉದ್ಘಾಟನಾ ಕಾರ್ಯಕ್ರಮವು ಜೂನ್ 27ರಂದು ಸೇಕ್ರೆಡ್ಹಾರ್ಟ್ ಸಭಾಭವನದಲ್ಲಿ ಸ್ವಾಗತ ನೃತ್ಯದೊಂದಿಗೆಪ್ರಾರಂಭವಾಯಿತು.

ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರಮೂಲಕ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷಸ್ಥಾನವನ್ನು ಶಾಲಾ ಸಂಚಾಲಕರಾದ ಸ್ವಾ|ಡಾ| ಸ್ಟ್ಯಾನಿಗೋವಿಯಸ್ ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಾಲಾ ಸಂಸತ್ತಿನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭ ಕೋರಿ,ಸಂಸ್ಥೆಯನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿ ಶಾಲೆಯ ಹಿತಕ್ಕಾಗಿ ಅವರು ಮುಕ್ತ ಹೃದಯ ಮತ್ತು ಮುಕ್ತ ಮನಸ್ಸಿನಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹೋಲಿ ಕ್ರಾಸ್ ಚರ್ಚ್ ಕಾರ್ಡೆಲ್ ನ ಸಹಾಯಕ ಧರ್ಮ ಗುರುಗಳಾದ ಸ್ವಾ| ಲಾಯಿಡ್ ರೋಹನ್ ಡಿಸೋಜ ಆಗಮಿಸಿದ್ದರು. ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ನಿಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ಎಲ್ಲರ ಮಾತನ್ನು ಆಲಿಸಿ ಮತ್ತು ನಿಮ್ಮ ಅತ್ಯುತ್ತಮ ಸೇವೆಯನ್ನು ನೀಡಿ ಸದಾ ಸತ್ಯನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳಿ.ಸಣ್ಣ ಸೇವೆಯೂ ಸಮಾಜಕ್ಕೆ ದೊಡ್ಡ ಕೊಡುಗೆಯಾಗುತ್ತದೆ ಎಂದು ಹೇಳಿ, ಶಾಲಾ ಸಂಸತ್ತಿನಲ್ಲಿಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಲಾಯಿಡ್ರೋಹನ್ ಡಿಸೋಜ ರವರನ್ನು ಅಭಿನಂದಿಸಲಾಯಿತು.ಈ ಕಾರ್ಯಕ್ರಮದಲ್ಲಿ ಶಾಲಾ ಸಂಸತ್ತಿನಲ್ಲಿ ಆಯ್ಕೆಯಾದವಿದ್ಯಾರ್ಥಿಗಳು ಪಥ ಸಂಚಲನದ ಮೂಲಕ ವೇದಿಕೆಗೆ ಆಗಮಿಸಿ, ತಮ್ಮ ನಾಯಕತ್ವದ ಪದವಿಯನ್ನು ಗಣ್ಯ ವ್ಯಕ್ತಿಗಳಿಂದ ಪಡೆದು,ಪ್ರತಿಜ್ಞೆಯನ್ನು ಸ್ವೀಕರಿಸಿದರು.

ಶಾಲಾ ಸಂಸತ್ತಿನಲ್ಲಿ ಆಯ್ಕೆಯಾದವಿದ್ಯಾರ್ಥಿಗಳಿಗೆ ಶಾಲಾ ಸಂಚಾಲಕರು, ಮುಖ್ಯ ಅತಿಥಿಗಳು,ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದವರು ಶುಭಕೋರಿದರು.ಈ ಕಾರ್ಯಕ್ರಮದಲ್ಲಿ ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರಿನ ಸಹಾಯಕ ಧರ್ಮ ಗುರುಗಳಾದ ಸ್ವಾ| ಲ್ಯಾರಿ ಪಿಂಟೋ ರವರು, ಶಾಲಾ ಮುಖ್ಯೋಪಾಧ್ಯಾಯವರಾದ ಸ್ವಾ|ದೀಪಕ್ ಲಿಯೋ ಡೇಸರವರು, ಮಡಂತ್ಯಾರು ಚರ್ಚಿನಉಪಾಧ್ಯಕ್ಷ ನೆಲ್ಸನ್ ಲಸ್ರಾದೊ ಸೇಕ್ರೆಡ್ ಹಾರ್ಟ್ ಶಿಕ್ಷಣ ಸಂಸ್ಥೆಗಳ ಸಂಯೋಜಕ ಲಿಯೋ ನೊರೊನ್ಹಾ, ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದರು

ಶಾಲಾ ಸಂಸತ್ತಿನಲ್ಲಿಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಹಶಿಕ್ಷಕಿಯರಾದ ಐಡಾ ಡಿಕುನ್ಹಾ,ಮಲ್ಲಿಕಾ ರವರು ತರಬೇತಿಯನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದರು. ಕಾರ್ಯಕ್ರಮವನ್ನುವಿದ್ಯಾರ್ಥಿಗಳಾದ ಆರಾಧ್ಯ ಮತ್ತು ನಿಧೀಶ್ ಶೆಟ್ಟಿ ನಿರೂಪಿಸಿ, ನಿಧಾ ಸ್ವಾಗತಿಸಿ, ವರ್ಣೀತ್ ವಂದಿಸಿದರು.

LEAVE A REPLY

Please enter your comment!
Please enter your name here