







ಬೆಳ್ತಂಗಡಿ: ಮಂಗಳೂರಿನ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಪಟ್ಲ ಯಕ್ಷಾಶ್ರಯ ಯೋಜನೆಯಡಿ ಯಕ್ಷ ಕಲಾವಿದ ಪ್ರಭಾಕರ ಶೆಟ್ಟಿಯವರಿಗೆ ತೆಂಕಕಾರಂದೂರಿನ ಪಳಿಕೆಯಲ್ಲಿ ಮನೆ ನಿರ್ಮಾಣ ಮಾಡಿಕೊಟ್ಟಿದ್ದು ಇದರ ಗೃಹಪ್ರವೇಶ ಹಾಗೂ ಮನೆ ಹಸ್ತಾಂತರ ಕಾರ್ಯಕ್ರಮ ಜೂ.27ರಂದು ನೆರವೇರಿತು.



ಯಕ್ಷದ್ರುವ ಪಟ್ಲ ಫೌಂಡೇಶನ್ ಅಶಕ್ತ ಯಕ್ಷ ಕಲಾವಿದರಿಗೆ ಅನೇಕ ಸೇವಾಕಾರ್ಯಗಳನ್ನು ಮಾಡುತ್ತಿದ್ದು ಅದರಲ್ಲಿ ಯಕ್ಷಾಶ್ರಯ ಯೋಜನೆಯೂ ಒಂದು. ಯಕ್ಷ ಕಲಾವಿದ ಪ್ರಭಾಕರ ಶೆಟ್ಟಿಯವರ ಅರ್ಧಕ್ಕೆ ನಿಂತು ಹೋಗಿದ್ದ ಮನೆ ನಿರ್ಮಾಣ ಕಾರ್ಯದ ಜವಬ್ದಾರಿ ವಹಿಸಿಕೊಂಡ ಪಟ್ಲ ಫೌಂಡೇಶನ್ ಇದೀಗ ಸುಜಜ್ಜಿತ ಮನೆ ನಿರ್ಮಿಸಿಕೊಟ್ಟು ಹಸ್ತಾಂತರ ಮಾಡಿದೆ. ಯಕ್ಷ ಕಲಾವಿದರು, ಯಕ್ಷದ್ರುವ ಪಟ್ಲ ಫೌಂಡೇಶನ್‌ನ ಪದಾಧಿಕಾರಿಗಳು ಭಾಗವಹಿಸಿ ಶುಭ ಹಾರೈಸಿದರು.
ಯಕ್ಷದ್ರುವ ಪಟ್ಲ ಫೌಂಡೇಷನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಯಕ್ಷದ್ರುವ ಪಟ್ಲ ಫೌಂಡೇಷನ್ ಬೆಳ್ತಂಗಡಿ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ, ನವಶಕ್ತಿ ರಾಜೇಶ್ ಶೆಟ್ಟಿ, ಭುಜಬಲಿ ಧರ್ಮಸ್ಥಳ, ದೇವದಾಸ್ ಶೆಟ್ಟಿ ಹಿಬರೋಡಿ, ಶ್ರುತಿ ಆರ್ಟ್ ಸಂಸ್ಥೆಯ ದಿವಾಕರ್ ದಾಸ್ ಕಾವಲಕಟ್ಟೆ, ಗಣೇಶ್ ಲ್ಯಾಬ್ ನ ಕ್ಷಿತಿಕಂಠ ಭಟ್ ಉಪಸ್ತಿತರಿದ್ದರು.









