






ಕುವೆಟ್ಟು: ಸ.ಉ.ಹಿ.ಪ್ರಾ.ಶಾಲೆ ಕುವೆಟ್ಟು ದ.ಕ. ಜಿಲ್ಲಾ ಪಂಚಾಯತ್ ಜಿಲ್ಲಾ ತಾಲೂಕು ನಿಯಂತ್ರಣ ಕೋಶ ಇಲ್ಲಿಯ ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿ ಶ್ರೀಮತಿ ಶೃತಿ ಜೆ ಸಾಲ್ಯಾನ್ ಹಾಗೂ ಜಿಲ್ಲಾ ಮಾಹಿತಿ ಸಲಹೆಗಾರ/ತರಭೇತುದಾರ ಪುಂಡಲಿಕ ಲಕಾಟಿ ಇವರು ಶಾಲಾ ವಿದ್ಯಾರ್ಥಿಗಳಿಗೆ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳು, ರೋಗಗಳು, ಕ್ಯಾನ್ಸರ್, ತಂಬಾಕು ನಿಯಂತ್ರಣ, ತಂಬಾಕು ಮುಕ್ತ ವಾತಾವರಣದ ಬಗ್ಗೆ ಮಾಹಿತಿಯನ್ನು ನೀಡಿದರು l.


ಹಾಗೂ ವಿದ್ಯಾರ್ಥಿಗಳಿಗೆ ಪ್ರಮಾಣ ವಚನವನ್ನು ಬೋಧಿಸಿದರು ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಭಾಸ್ಕರ. ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು ಶಾಲಾ ಮುಖ್ಯ ಶಿಕ್ಷಕ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು









