ಲಾಯಿಲ: ರಸ್ತೆಬದಿಯ ಗಿಡಗಂಟಿ ತೆರವು ಹಾಗೂ ಚರಂಡಿ ಹೂಳೆತ್ತಲು ಗ್ರಾಮ ಪಂಚಾಯತ್‌ಗೆ ಸಾರ್ವಜನಿಕರ ಮನವಿ

0

ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಬದಿಗಳಲ್ಲಿ ಈಗಾಗಲೇ ಗಿಡಗಂಟಿಗಳು ಬೆಳೆದಿದ್ದು ಇದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೊಂದರೆ ಆಗುತ್ತಿದ್ದು ಮತ್ತು ರಸ್ತೆ ಬದಿ ಇರುವ ಚರಂಡಿಗಳಲ್ಲಿ ಹೂಳುಗಳು ತುಂಬಿದ್ದು ಇದರಿಂದ ಮಳೆ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯಲ್ಲಿ ಹರಿಯುತ್ತಿದ್ದು ಪ್ರತಿ ವರುಷದಂತೆ ಈ ಬಾರಿಯೂ ಈ ಎರಡು ಕೆಲಸವನ್ನು ತುರ್ತಾಗಿ ಮಾಡಬೇಕೆಂದು ಸಾರ್ವಜನಿಕರ ಪರವಾಗಿ ಜೂ.24 ರಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾನಾಥ್ ಗೆ ಮನವಿಯನ್ನು ಸಲ್ಲಿಸಲಾಯಿತು.

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಧಾಕರ್ B. L , ರುಕ್ಮಯ ಕನ್ನಾಜೆ, ಮಾಜಿ ಉಪಾಧ್ಯಕ್ಷ ಗಿರೀಶ್ ಡೂoಗ್ರೆ, ಗಣೇಶ್. ಆರ್, ನಿಕಟ ಪೂರ್ವ ಗ್ರಾಮ ಪಂಚಾಯತ್ ಸದಸ್ಯ ಅರವಿಂದ್ ಕುಮಾರ್, ಹರಿಕೃಷ್ಣ ಪುತ್ರಬೈಲು,C. A ಬ್ಯಾಂಕ್ ನಿರ್ದೇಶಕರಾದ ರಮೇಶ್ ನಲಿಕೆ, ಪ್ರಶಾಂತ್ ರಾಮಗಿರಿ, ಮಂಜು ಕನ್ನಾಜೆ, ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here