






ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ2026-27ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ನಾಯಕ ಮತ್ತು ಉಪನಾಯಕ ಸ್ಥಾನಕ್ಕೆ ಮತದಾನವು ಜೂನ್ 23ರಂದು ನಡೆಯಿತು.


ಈ ಶೈಕ್ಷಣಿಕ ವರ್ಷದ ಮತದಾನವು ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಮಾದರಿ (EVM) ಮೂಲಕ ನೆರವೇರಿತು. 10ನೇ ತರಗತಿಯ ಇಚ್ಛಾ ಶೆಟ್ಟಿ ಶಾಲಾ ನಾಯಕಿಯಾಗಿ ಹಾಗೂ 9ನೇ ತರಗತಿಯ ನಿಖಿಲ್ ಶೆಟ್ಟಿ ರವರು ಉಪನಾಯಕನಾಗಿ ಬಹುಮತದಿಂದ ಆಯ್ಕೆಯಾದರು.

ಶಾಲಾ ಮುಖ್ಯೋಪಾಧ್ಯಾಯರ ಸ್ವಾ| ದೀಪಕ್ ಲಿಯೋ ಡೇಸರವರು ಈ ಶೈಕ್ಷಣಿಕ ವರ್ಷದ ಮತದಾನವು ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಮೂಲಕ ನಡೆಸಲು ಉತ್ತೇಜಿಸಿದರು. ಶಾಲಾ ಶಿಕ್ಷಕ ವೃಂದದವರು, ಚುನಾವಣೆಯು ಉತ್ತಮವಾಗಿ ನೆರವೇರಲು ಸಹಕರಿಸಿದರು.









