






ಬೆಳ್ತಂಗಡಿ : ಒಕ್ಕಲಿಗ ಗೌಡರ ಯುವ ವೇದಿಕೆ ಬೆಳ್ತಂಗಡಿ ತಾಲೂಕು ಘಟಕದ ನೇತೃತ್ವದಲ್ಲಿ, ಹಲವು ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಕೆಂಪೇಗೌಡ ಜಯಂತಿ ಆಚರಣೆಯ ಅಂಗವಾಗಿ ಬೃಹತ್ ಉಚಿತ ವೈದ್ಯಕೀಯ, ಕಣ್ಣಿನ ತಪಾಸಣೆ, ರಕ್ತದಾನ ಹಾಗೂ ದಂತ ಚಿಕಿತ್ಸಾ ಶಿಬಿರವನ್ನು ಜೂ. 27 ರಂದು ಸಂಗಮ ಸಭಾ ಭವನ, ಲ್ಯಾಲ್, ಜ್ಯೋತಿ ಹಾಸ್ಪಿಟಲ್ ಬಳಿ, ಬೆಳ್ತಂಗಡಿ. ಆಯೋಜಿಸಲಾಗಿದೆ.
ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1:00 ರವರೆಗೆ. ಆಸಕ್ತರು ಮಧ್ಯಾಹ್ನ 12:00 ರೊಳಗೆ ನೋಂದಣಿ ಮಾಡಿಸಿಕೊಳ್ಳಬೇಕು.ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್, ಸಂಘ, ಮಹಿಳಾ ವೇದಿಕೆ, ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಹಾಗೂ K.M.C ಆಸ್ಪತ್ರೆ ಅತ್ತಾವರ, ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸ್, ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮಂಗಳೂರು ಇವರ ಜಂಟಿ ಸಹಕಾರದಿಂದ ಈ ಶಿಬಿರ ನಡೆಯಲಿದೆ.


ಸಾಮಾನ್ಯ ರೋಗ ವಿಭಾಗಎಲುಬು ಮತ್ತು ಕೀಲು ರೋಗ ವಿಭಾಗ ಕಣ್ಣಿನ ವಿಭಾಗಕಿವಿ, ಮೂಗು ಮತ್ತು ಗಂಟಲು ವಿಭಾಗದಂತ ಚಿಕಿತ್ಸಾ ವಿಭಾಗ ಶಿಬಿರದಲ್ಲಿ ಲಭ್ಯವಿರುವ ಸೌಲಭ್ಯಗಳು:ಉಚಿತ ರಕ್ತದೊತ್ತಡ (B.P) ಮತ್ತು ಮಧುಮೇಹ (ಶುಗರ್) ಪರೀಕ್ಷೆಕೇವಲ ₹80 ರಿಯಾಯಿತಿ ದರದಲ್ಲಿ ಓದುವ ಕನ್ನಡಕ- ಲಭ್ಯವಿರುವ ಔಷಧಗಳ ಉಚಿತ ವಿತರಣೆ, ಹುಳುಕು ಹಲ್ಲುಗಳಿಗೆ ಸಿಮೆಂಟ್ ತುಂಬಿಸುವುದು ಹಾಗೂ ಹಲ್ಲು ಸ್ವಚ್ಛಗೊಳಿಸುವುದು
ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ “ಹಸಿರು ಕಾರ್ಡ್” ನೀಡಲಾಗುವುದು. ಈ ಕಾರ್ಡ್ ಮುಖಾಂತರ K.M.C ಆಸ್ಪತ್ರೆ ಅತ್ತಾವರದಲ್ಲಿ ಒಳರೋಗಿಯಾಗಿ ದಾಖಲಾದರೆ, ಶಸ್ತ್ರಚಿಕಿತ್ಸೆಗೆ ₹10,000/- ಮತ್ತು ಇತರ ಚಿಕಿತ್ಸೆಗೆ ₹5,000/- ವರೆಗೆ ರಿಯಾಯಿತಿ ಸೌಲಭ್ಯ ದೊರೆಯಲಿದೆ.ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.









