ಬೆಳ್ತಂಗಡಿ: ವಾಣಿ ಆಂಗ್ಲ ಮಾಧ್ಯಮ ಶಾಲೆಯ ನೂತನ ವಿದ್ಯಾರ್ಥಿ ಮಂತ್ರಿಮಂಡಲ ರಚನೆ; ಶಾಲಾ ನಾಯಕಿಯಾಗಿ ಕು. ನಿಶಾ ಆಯ್ಕೆ

0

ಬೆಳ್ತಂಗಡಿ: ಹಳೆಕೋಟೆಯ ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 2026-27ನೇ ಸಾಲಿನ ನೂತನ ಶಾಲಾ ಸಂಸತ್ (ಮಂತ್ರಿಮಂಡಲ) ರಚನೆ ಪ್ರಕ್ರಿಯೆಯು ಜೂ.23 ರಂದು ನಡೆಯಿತು.

ಪ್ರಸಕ್ತ ಸಾಲಿನ ಶಾಲಾ ವಿದ್ಯಾರ್ಥಿ ನಾಯಕಿಯಾಗಿ (SPL) 10ನೇ ತರಗತಿಯ ಕು| ನಿಶಾ ಜಿ. ಅವರು ಆಯ್ಕೆಯಾಗಿದ್ದಾರೆ. ಅದೇ ರೀತಿ ಶಾಲಾ ಉಪನಾಯಕರಾಗಿ (ASPL) 10ನೇ ತರಗತಿಯ ಕು| ಮಯೂರಿ ಅರುಣ್ ಕದಮ್ ಹಾಗೂ 9ನೇ ತರಗತಿಯ ಮಾ| ಚಕ್ಷನ್ ಪಿ. ಅವರು ಬಹುಮತದೊಂದಿಗೆ ಚುನಾಯಿತರಾಗಿದ್ದಾರೆ.

ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದವರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ಶೈಕ್ಷಣಿಕ ವರ್ಷದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಲಿ ಎಂದು ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here