ಕೊರಂಜ ಸರಕಾರಿ  ಉನ್ನತೀಕರಿಸಿದ ಪ್ರಾಥಮಿಕ ಶಾಲಾ ಸಂಸತ್ತಿಗೆ ಆಯ್ಕೆ ; ನಾಯಕಿಯಾಗಿ ಅಸ್ಪಾನ ಉಪನಾಯಕನಾಗಿ ಶ್ರಮಿಕ್

0

ಗೇರುಕಟ್ಟೆ :  ಕೊರಂಜ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ಸಂಸತ್ತಿನ ಚುನಾವಣೆ ನಡೆಯಿತು. ಈ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತಿನ  ನಾಯಕಿಯಾಗಿ ಎಂಟನೇ ತರಗತಿಯ ಅಸ್ಫಾನ ಹಾಗೂ ಉಪನಾಯಕನಾಗಿ ಏಳನೇ ತರಗತಿಯ ಶ್ರಮಿಕ್ ಆಯ್ಕೆಯಾಗಿರುತ್ತಾರೆ.

ಸ್ಪೀಕರ್, ವಿರೋಧ ಪಕ್ಷ, ಶಿಸ್ತು ಮತ್ತು ಶಿಕ್ಷಣ,, ಆಹಾರ ಮತ್ತು ಆರೋಗ್ಯ, ಸಾಂಸ್ಕೃತಿಕ, ಕ್ರೀಡಾ, ನೀರಾವರಿ ಮತ್ತು ತೋಟಗಾರಿಕೆ, ವಾರ್ತಾ ಮಂತ್ರಿ ಹೀಗೆ ಬೇರೆ ಬೇರೆ ಖಾತೆಗಳ ಮಂತ್ರಿಗಳ ಆಯ್ಕೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ನೂತನ ಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿ ಶಾಲೆಯ ಶಿಸ್ತು ಸ್ವಚ್ಛತೆ ಹಾಗೂ ವಿದ್ಯಾರ್ಥಿಗಳ ಸಹಾಯಕ್ಕೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಪ್ರತಿಜ್ಞೆ ಮಾಡಿದರು .

ಮುಖ್ಯೋಪಾಧ್ಯಾಯರಾದ ಅನುರಾಧ ಬಿ. ಸಿ. ವಿದ್ಯಾರ್ಥಿ ನಾಯಕರುಗಳಿಗೆ ಪ್ರಮಾಣವಚನ ಬೋಧಿಸಿ ಶುಭ ಹಾರೈಸಿ, ಜವಾಬ್ದಾರಿಗಳ ಬಗ್ಗೆ ತಿಳಿಸಿ, ನಾಯಕತ್ವ ಗುಣ ಬೆಳೆಸಿಕೊಳ್ಳುವಂತೆ ತಿಳಿಸಿದರು.

ದೈಹಿಕ ಶಿಕ್ಷಕ ರವಿರಾಜ್ ಗೌಡ ಸಂಸತ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here