ಕುಕ್ಕೇಡಿಯಲ್ಲಿ ಪ್ಲಾಸ್ಟಿಕ್ ಬಳಕೆ ಅರಿವು, ಸ್ವಚ್ಛತಾ ಕಾರ್ಯ

0

ಕುಕ್ಕೇಡಿ :ಮಹಾತ್ಮಾ ಗಾಂಧಿ ಗ್ರಾಮ ಪಂಚಾಯತ್ ಕುಕ್ಕೇಡಿ, ಶ್ರೀ ಧರ್ಮಸ್ಥಳ ಮಂಜುನಾಥೆಶ್ವರ ಕೈಗಾರಿಕಾ ಸಂಸ್ಥೆ ಗೋಳಿಯಂಗಡಿ ವೇಣೂರು, ಬೃಂದಾವನ ಸಂಜೀವಿನಿ ಸಂಘ ಕುಕ್ಕೇಡಿ ನಿಟ್ಟಡೆ ಹಾಗೂ ವಿವಿಧ ಸಂಘ ಸಂಸ್ಥೆ ಗಳ ವತಿಯಿಂದ ಜೂ. 20ರಂದು ಕುಕ್ಕೇಡಿ ಗ್ರಾಮ ಪಂಚಾಯತನ ವಠಾರ ಮತ್ತು ರಾಜ್ಯ ಹೆದ್ದಾರಿ ಗೋಳಿಯಂಗಡಿ ಯಿಂದ ಕುಂಭ ಶ್ರೀ ಶಾಲಾ ವಠಾರ ದ ವರೆಗೆ ಮತ್ತು ಗೋಳಿಯಂಗಡಿ ಯಿಂದ ನಿಟ್ಟಡೆ ಶಾಲಾ ವಠಾರದವರೆಗೆ ಗ್ರಾಮೀಣ ಪ್ರದೇಶ ದ ಜನರಿಗೆ ಸಮರ್ಪಕವಾಗಿ ಪ್ಲಾಸ್ಟಿಕ್ ಬಳಕೆ ಅರಿವು ಮೂಡಿಸಲು ಸ್ವಚ್ಛತಾ ಕಾರ್ಯಕ್ರಮ ಮತ್ತು ಪ್ರತಿಜ್ಞಾ ವಿಧಿ ಬೋಧನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಶ್ರೀ ಧರ್ಮಸ್ಥಳ ಮಂಜುನಾಥೆಶ್ವರ ಕೈಗಾರಿಕಾ ಸಂಸ್ಥೆ ವತಿಯಿಂದ ಸಾರ್ವಜನಿಕ ರಲ್ಲಿ ಸ್ವಚ್ಛತೆ ಯ ಅರಿವು ಮೂಡಿಸಲು ಕರಪತ್ರ ವನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಕುಕ್ಕೇಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾಕರ್ ಡಿ, ಶ್ರೀ ಧರ್ಮಸ್ಥಳ ಮಂಜುನಾಥೆಶ್ವರ ಕೈಗಾರಿಕಾ ಸಂಸ್ಥೆ ಯ ಪ್ರಾಧ್ಯಾಪಕರುಗಳು, ವಿದ್ಯಾರ್ಥಿಗಳು,ವಿವಿಧ ಮಹಿಳಾ ಸಂಘ ದ ಸದಸ್ಯರು ಗಳು, ಪಂಚಾಯತ್ ಸಿಬ್ಬಂದಿಗಳು ಪಾಲ್ಗೊಂಡು ಸ್ವಚ್ಛತಾ ಕಾರ್ಯಕ್ರಮ ವನ್ನು ಯಶಸ್ವಿ ಗೊಳಿಸಿದರು,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾಕರ್ ಡಿ. ಸ್ವಾಗತಿಸಿ, ಜಗನ್ನಾಥ್ ದೇವಾಡಿಗ ವಂದಿಸಿದರು. ಪಂಚಾಯತ್ ವತಿಯಿಂದ ಭಾಗವಹಿಸಿದ ಎಲ್ಲರಿಗೂ ಉಪಹಾರ ದ ವ್ಯವಸ್ಥೆ ಯನ್ನು ಮಾಡಲಾಯಿತು

LEAVE A REPLY

Please enter your comment!
Please enter your name here