






ಬಳಂಜ: ಕ್ಲಬ್ ನ 2026-27 & 2027-28 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಜೂ.17ರಂದು ಉಮಾಮಹೇಶ್ವರ ಯುವಕ ಮಂಡಲದಲ್ಲಿ ಸದಸ್ಯರ ಸಮ್ಮುಖದಲ್ಲಿ ನಡೆಯಿತು. ಮುಂದಿನ ಎರಡು ವರ್ಷಗಳ ಅವಧಿಗೆ ಕ್ಲಬ್ ನ ಅಧ್ಯಕ್ಷರಾಗಿ ಅಳದಂಗಡಿ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆಯವರನ್ನು ಆಯ್ಕೆ ಮಾಡಲಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಯತೀಶ್ ದೇವಾಡಿಗ, ಉಪಾಧ್ಯಕ್ಷರಾಗಿ ಯೋಗೀಶ್ ದೇವಾಡಿಗ, ಸಂಘಟನಾ ಕಾರ್ಯದರ್ಶಿಯಾಗಿ ಸುಕೇಶ್ ಹಾನಿಂಜ, ಕೋಶಾಧಿಕಾರಿಯಾಗಿ ಜಗದೀಶ್ ಶೆಟ್ಟಿ ನೆಕ್ಕಿಲ ಹಾಗೂ ಜೊತೆಕಾರ್ಯದರ್ಶಿಯಾಗಿ ಡೀಕಯ್ಯ ಕುಲಾಲ್ ಅವರನ್ನು ಸರ್ವ ಸದಸ್ಯರ ಅನುಮೋದನೆಯ ಮೂಲಕ ಆಯ್ಕೆ ಮಾಡಲಾಯಿತು.



ಕಳೆದ ಅವಧಿಯ ಕಾರ್ಯದರ್ಶಿ ಸಂತೋಷ್ ಕೊಡಂಗೆ, ಉಪಾಧ್ಯಕ್ಷ ಪ್ರಕಾಶ್ ದೇವಾಡಿಗ ಹಾಗೂ ಇನ್ನಿತರ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.









