








ಬೆಳ್ತಂಗಡಿ: ಬೆಳಾಲು ಸಿಎ ಬ್ಯಾಂಕ್ನಲ್ಲಿ ನಡೆದಿದೆ ಎನ್ನಲಾದ ಹಗರಣದ ಆರೋಪಿ ಪ್ರಶಾಂತ್ ಎಂಬವರಿಗೆ ವಿಶ್ಲೇಶ್ ಗೌಡ ಎಂಬಾತ ಹಲ್ಲೆ ನಡೆಸಿ ಗಾಯಗೊಳಿಸಿ ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂದಾರು ಗ್ರಾಮದ ಬೈದ್ರೋಟ್ಟು ನಿವಾಸಿಯಾಗಿರುವ ಪ್ರಶಾಂತ್ ಅವರು ಠಾಣೆಗೆ ದೂರು ಸಲ್ಲಿಸಿದ್ದರು. ನ್ಯಾಯಾಲಯದ ಅನುಮತಿ ದೊರೆತ ಬಳಿಕ ಧರ್ಮಸ್ಥಳ ಠಾಣಾ ಪೊಲೀಸರು ವಿಶ್ಲೇಶ್ ಗೌಡ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳಾಲು ಸಿ.ಎ. ಬ್ಯಾಂಕ್ಗೆ ಏ.೨೨ರಂದು ಬಂದಿದ್ದ ಪ್ರಶಾಂತ್ ತನ್ನ ಕೆಲಸ ಮುಗಿಸಿ ಸೊಸೈಟಿಯಿಂದ ಹೊರಗೆ ಬಂದಾಗ ವಠಾರದಲ್ಲಿದ್ದ ತನ್ನ ಪರಿಚಯದ ವಿಶ್ಲೇಶ್ ಗೌಡ ಎಂಬಾತ ಪ್ರಶಾಂತ್ ಬಳಿ ಬಂದು ನನ್ನ ಬಂಗಾರ ಎಲ್ಲಿ ಎಂದು ಜಗಳ ತೆಗೆದು ಕೈಯಿಂದ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ.
ವಿಶ್ಲೇಶ್ ಗೌಡ ಕೈಯಿಂದ ಹಲ್ಲೆ ಮಾಡಿದಾಗ ಪ್ರಶಾಂತ್ ಕೈ ಅಡ್ಡ ಇಟ್ಟಾಗ ಆತನ ಕೈ ಬೆರಳಿಗೆ ಗಾಯವಾಗಿದೆ ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.








