ಟ್ರೆಕ್ಕಿಂಗ್ ಸುರಕ್ಷತೆಗೆ ಹೊಸ ಹೆಜ್ಜೆ: ಕುಡಿಯುವ ನೀರು-ನೆಟ್‌ವರ್ಕ್ ಪಾಯಿಂಟ್‌ಗಳಲ್ಲಿ ಸ್ಮಾರ್ಟ್ ಸೈನೇಜ್ ಬೋರ್ಡ್

0

ಬೆಳ್ತಂಗಡಿ : ಪಶ್ಚಿಮ ಘಟ್ಟದ ಚಾರಣ ಮಾರ್ಗಗಳಲ್ಲಿ ದಾರಿ ತಪ್ಪುವುದು ಮತ್ತು ಮೂಲ ಸೌಕರ್ಯಗಳ ಕೊರತೆ ತಪ್ಪಿಸಲು ಕರ್ನಾಟಕ ಅರಣ್ಯ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಪ್ರತಿ ಕುಡಿಯುವ ನೀರು ಮತ್ತು ಮೊಬೈಲ್ ನೆಟ್‌ವರ್ಕ್ ಲಭ್ಯವಿರುವ ಸ್ಥಳಗಳಲ್ಲಿ ‘ಸ್ಮಾರ್ಟ್ ಸೈನೇಜ್ ಬೋರ್ಡ್’ ಅಳವಡಿಸಲು ನಿರ್ಧರಿಸಿದೆ.

ಸೈನೇಜ್ ಬೋರ್ಡ್‌ನಲ್ಲಿ ಏನಿರುತ್ತೆ?

  1. ಲೈವ್ ಸ್ಟೇಟಸ್: ಈ ಸ್ಥಳದಲ್ಲಿ ನೀರು/ನೆಟ್‌ವರ್ಕ್ ಲಭ್ಯ ಇದೆಯೋ ಇಲ್ಲವೋ
  2. ಮುಂದಿನ ನೆಟ್‌ವರ್ಕ್ ಪಾಯಿಂಟ್‌ಗೆ ದೂರ: ಕಿ.ಮೀ.ನಲ್ಲಿ ನಿಖರ ಮಾಹಿತಿ
  3. ಮುಂದಿನ ಕುಡಿಯುವ ನೀರಿನ ಪಾಯಿಂಟ್‌ಗೆ ದೂರ
  4. ಅಂತಿಮ ಗುರಿ ತಲುಪಲು ಇರುವ ದೂರ
  5. ಟ್ರೆಕ್ ಮಾರ್ಗದ ದಿಕ್ಕು: ಬಾಣದ ಗುರುತಿನೊಂದಿಗೆ
  6. ಮಾಡಬೇಕಾದವು-ಬೇಡವಾದವು: ಅರಣ್ಯ ನಿಯಮಗಳು, ಸುರಕ್ಷತಾ ಸೂಚನೆ
  7. ‘ನೀವು ಇಲ್ಲಿದ್ದೀರಿ’ ನಕ್ಷೆ: ನೀರು, ನೆಟ್‌ವರ್ಕ್, ಸ್ಟಾರ್ಟ್ ಹಾಗೂ ಎಂಡ್ ಪಾಯಿಂಟ್ ಗುರುತಿಸಿರುವ ಮ್ಯಾಪ್
  8. QR ಕೋಡ್: ಆಫ್‌ಲೈನ್ ಮ್ಯಾಪ್ ಡೌನ್‌ಲೋಡ್ ಮಾಡಿಕೊಳ್ಳಲು
  9. ತುರ್ತು ಸಂಪರ್ಕ ಸಂಖ್ಯೆಗಳು: ಅರಣ್ಯ ಇಲಾಖೆ 1926, ಪೊಲೀಸ್ 100, ಆಂಬ್ಯುಲೆನ್ಸ್ 108

ಅನುಷ್ಠಾನ ಎಲ್ಲಿ?
ಮೊದಲ ಹಂತದಲ್ಲಿ ಕುಮಾರ ಪರ್ವತ, ಎತ್ತಿನ ಭುಜ, ಬಂಡಾಜೆ ಅರ್ಬಿ, ನರಸಿಂಹ ಪರ್ವತ ಟ್ರೆಕ್ ಮಾರ್ಗಗಳಲ್ಲಿ ಜೂನ್ 15ರಿಂದ 120 ಬೋರ್ಡ್ ಅಳವಡಿಕೆ ಆರಂಭವಾಗಲಿದೆ.

“ಕಳೆದ ವರ್ಷ ರಾಜ್ಯದಲ್ಲಿ 17 ಚಾರಣಿಗರು ದಾರಿ ತಪ್ಪಿದ ಪ್ರಕರಣ ವರದಿಯಾಗಿದೆ. ನೀರು-ನೆಟ್‌ವರ್ಕ್ ಮಾಹಿತಿ ಇಲ್ಲದೆ 3 ಜನ ಅಸ್ವಸ್ಥರಾಗಿದ್ದರು. ಈ ಬೋರ್ಡ್‌ಗಳಿಂದ ದುರಂತ ತಪ್ಪಿಸಬಹುದು. QR ಕೋಡ್ ಮೂಲಕ ಆಫ್‌ಲೈನ್ ಮ್ಯಾಪ್ ಸಿಗುವುದರಿಂದ ಮೊಬೈಲ್ ನೆಟ್‌ವರ್ಕ್ ಇಲ್ಲದಿದ್ದರೂ ದಾರಿ ಗೊತ್ತಾಗುತ್ತದೆ” ಎಂದು ಪಿಸಿಎಫ್ ಸುಭಾಷ್ ಮಲ್ಕೆಡೆ ತಿಳಿಸಿದ್ದಾರೆ.
ರೂ.45 ಲಕ್ಷ ವೆಚ್ಚದಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ ಮೂರು ಭಾಷೆಯಲ್ಲಿ ಮಾಹಿತಿ ಇರುವ ರಾತ್ರಿ ಕಾಣುವ ರಿಫ್ಲೆಕ್ಟಿವ್ ಬೋರ್ಡ್ ಅಳವಡಿಕೆಯಾಗಲಿದೆ.

ಅರಣ್ಯ ಇಲಾಖೆಯ ಪೂರ್ವಾನುಮತಿ ಇಲ್ಲದೆ ಚಾರಣಕ್ಕೆ ತೆರಳುವಂತಿಲ್ಲ. ಮಳೆಗಾಲದಲ್ಲಿ ಏಕಾಂಗಿ ಟ್ರೆಕ್ ನಿಷೇಧ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here