






ಬೆಳ್ತಂಗಡಿ: ‘ವಾಚ್ ಸಮಯ ನೋಡುವ ಸಾಧನವಲ್ಲ, ಅದು ಸೌಂದರ್ಯ ಪ್ರಜ್ಞೆ, ವ್ಯಕ್ತಿತ್ವವನ್ನು ತೋರಿಸಿಕೊಡುತ್ತದೆ. ಬೆಳ್ತಂಗಡಿಯಲ್ಲಿ ಟೈಟನ್ ವಾಚ್ ನ ದೊಡ್ಡ ಸಂಗ್ರಹ ಎಲ್ಲಿಯೂ ಇರಲಿಲ್ಲ, ಹೀಗಿರುವಾಗ ಮುಳಿಯ ಉತ್ತಮ ವಾಚ್ ಸಂಗ್ರಹ ನೀಡುವ ಮೂಲಕ ಬೆಳ್ತಂಗಡಿ ಜನತೆಗೆ ಉತ್ತಮ ಅವಕಾಶ ಕಲ್ಪಿಸಿದೆ ಎಂದು ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ ಶುಭ ಹಾರೈಸಿದರು.
ಜೂ. 04 ರಂದು ಬೆಳ್ತಂಗಡಿ ಮುಳಿಯ ಗೋಲ್ಡ್ & ಡೈಮಂಡ್ ನೂತನ ಉದ್ಯಮವಾದ ‘ಮುಳಿಯಾ’ಸ್ ಟೈಮ್ ಝೋನ್’ ವಾಚ್ ಶೋರೂಂ ಉದ್ಘಾಟಿಸಿ ಅವರು ಶುಭ ಹಾರೈಸಿದರು. ಮುಳಿಯ ಸಂಸ್ಥೆ ಕೇವಲ ಉದ್ಯಮವಾಗಿ ಬೆಳೆದಿಲ್ಲ, ಪ್ರತಿ ಕ್ಷೇತ್ರದಲ್ಲಿಯೂ ಸೇವಾರೂಪದಲ್ಲಿಯೂ ಮುಳಿಯ ಗುರುತಿಸಿಕೊಂಡಿದೆ. ನನ್ನ ದಸ್ಕತ್ ಸಿನಿಮಾ ಸಂದರ್ಭದಲ್ಲಿಯೂ ನನಗೆ ಸಹಕಾರ ಬೆಂಬಲ ಕೊಟ್ಟ ಸಂಸ್ಥೆ. ಈ ಸಂಸ್ಥೆ ಬಾನೆತ್ತರಕ್ಕೆ ಸಾಗಿ ಯಶಸ್ಸನ್ನು ಪಡೆಯಲಿ ಎಂದು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಉಪಸ್ಥಿತರಿದ್ದ ಕಾಮಿಡಿ ಕಿಲಾಡಿ ಖ್ಯಾತಿಯ ನಟ ಅನೀಶ್ ಪೂಜಾರಿ ಶುಭಕೋರಿದರು.



ಅಧ್ಯಕ್ಷತೆ ವಹಿಸಿದ್ದ ಮುಳಿಯ ಗೋಲ್ಡ್ & ಡೈಮಂಡ್ಸ್ ಎಂ.ಡಿ ಕೃಷ್ಣನಾರಾಯಣ ಮುಳಿಯ ಮಾತನಾಡಿ, ಹಿಂದಿನ ಕಾಲದ ಮೊಬೈಲ್, ಟಿ.ವಿ ಎಲ್ಲವೂ ಕಾಣೆಯಾಗಿದೆ, ಆದರೆ ವಾಚ್ ಮಾತ್ರ ಇಂದಿಗೂ ಅದೇ ಛಾಪನ್ನು ಮುಂದುವರಿಸಿಕೊಂಡು ಬಂದಿದೆ. ವಾಚ್ ಕೇವಲ ಸಮಯ ನೋಡಲು ಅಲ್ಲ, ವ್ಯಕ್ತಿತ್ವದ ಪ್ರತೀಕ ಎಂದರು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು ಹಾಗೂ ವಾಚ್ ನ ನೂತನ ಸಂಗ್ರಹವನ್ನು ಪ್ರದರ್ಶಿಸಲಾಯಿತು. ಮುಳಿಯ ಸಂಸ್ಥೆಯ ನಿರ್ದೇಶಕ ಅಶ್ವಿನಿ ಕೃಷ್ಣ ನಾರಾಯಣ ಮುಳಿಯ, ರೈಡಿಂಗ್ ಜೋಡಿ ಖ್ಯಾತಿಯ ದಂಪತಿಗಳು, ಗ್ರಾಹಕ ಮಿತ್ರರು, ಮುಳಿಯ ಸಂಸ್ಥೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ಬೆಳ್ತಂಗಡಿ ಶಾಖೆಯ ಶಾಖಾ ಪ್ರಬಂಧಕರಾದ ಲೋಹಿತ್ ಕುಮಾರ್ ಸ್ವಾಗತಿದರು. ಮುಳಿಯ ಸಿಬ್ಬಂದಿ ಕೃಷ್ಣಪ್ಪ ಧನ್ಯವಾದ ಸಲ್ಲಿಸಿದರು.









