







ಬೆಳ್ತಂಗಡಿ :ತಾಲೂಕು ಅರಸಿನಮಕ್ಕಿ ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಇದರ ನೂತನ ಮುದ್ದಿಗೆ ಶಾಖೆಯ ಉದ್ಘಾಟನಾ ಸಮಾರಂಭವು ಮೇ 14ರಂದು ಗುರುವಾರ ಬೆಳಗ್ಗೆ ಮುದ್ದಿಗೆಯ ದಿವಾಕರ ತಾಮ್ಹನ್ಕಾರ್ ಅವರ ಕಟ್ಟಡದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರಾಘವೇಂದ್ರ ನಾಯಕ್ ವಹಿಸಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್ ಸಂಘದ ನೂತನ ಶಾಖೆಯನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕರಾದ ಕುಶಾಲಪ್ಪ ಗೌಡ ಪೂವಾಜೆ ಹಾಗೂ ಅರಸಿನಮಕ್ಕಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಸುಧೀರ್ ಕುಮಾರ್ ಎಮ್.ಎಸ್. ಭಾಗವಹಿಸಿದರು.


ಈ ಸಂದರ್ಭದಲ್ಲಿ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಶ್ರೀಕರ ಭಿಡೆ, ಎಂ. ಕೇಶವ ರಾವ್, ಪಂಚಾಯತ್ ಮಾಜಿ ಸದಸ್ಯರಾದ ಹೆಚ್. ಸುಂದರ ತುಂಬೆತಡ್ಕ , ಸೂರಪ್ಪ ರಾಣೆಯಾರ್, ಕೃಷಿಕರಾದ ಬಾಲಕೃಷ್ಣ ರೈ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ವಾಮನ ತಾಮ್ಹನ್ಕಾರ್ ಹಾಗೂ ಕಟ್ಟಡ ಮಾಲಕರಾದ ದಿವಾಕರ ತಾಮ್ಹನ್ಕಾರ್, ಸಂಘದ ಉಪಾಧ್ಯಕ್ಷರಾದ ರಾಜು. ಕೆ ಸಾಲಿಯಾನ್, ನಿರ್ದೇಶಕರುಗಳಾದ, ಕೊರಗಪ್ಪ ಗೌಡ, ರತೀಶ್ ಬಿ, ತಾರಾ ಟಿ ಚಿಪ್ಲೂಣ್ ಕರ್, ಬೇಬಿ, ಬೇಬಿ ಕಿರಣ್, ಕೃಷ್ಣಪ್ಪ ಗೌಡ ಕೆ, ವರದ ಶಂಕರ್ ದಾಮ್ಲೆ, ನಾಗೇಶ್ ಜಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ. ರವಿಚಂದ್ರ ರಾವ್, ಡಿ ಸಿ ಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದಿನ್,ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಘದ ಉಪ ಕಾರ್ಯದರ್ಶಿ ಹರಿಣಾಕ್ಷಿ ನಿರೂಪಿಸಿ, ನಿರ್ದೇಶಕ ರತೀಶ್ ಬಿ ಸ್ವಾಗತಿಸಿ ನಿರ್ದೇಶಕ ಬೇಬಿ ಕಿರಣ್ ಧನ್ಯವಾದವಿತ್ತರು.









