






ಪುತ್ತೂರು ತಾಲೂಕಿನ ಬಾರಿಕೆ ವಳಾಲ್ ಬಸದಿಯ ಭಗವಾನ್ 1008 ಶ್ರೀ ಪಾರ್ಶ್ವನಾಥ ಸ್ವಾಮಿ ತೀರ್ಥಂಕರರ ಧಾಮಸಂಪ್ರೋಕ್ಷಣ ಪೂರ್ವಕ ಜಿನ ಬಿಂಬಗಳ ಪುನಃ ಪ್ರತಿಷ್ಠಾ ಮಹೋತ್ಸವವು ಜರುಗಿತು.


ಈ ಶುಭ ಸಂದರ್ಭದಲ್ಲಿ, ಬಸದಿಯ ಜೀರ್ಣೋದ್ಧಾರ ಕಾರ್ಯ ಹಾಗೂ ಮಹೋತ್ಸವದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಿದ ಧರ್ಮಸ್ಥಳದ ಡಾ. ಕೆ. ಜಯಕೀರ್ತಿ ಜೈನ್ ಅವರನ್ನು ಮೂಡುಬಿದ್ರಿ ಜೈನ್ ಮಠದ ಪರಮಪೂಜ್ಯ ಜಗದ್ಗುರು ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿಯವರು ಆಶೀರ್ವದಿಸಿ, ಶ್ರೀ ಮಠದ ವತಿಯಿಂದ ಗೌರವಿಸಿದರು.
ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಧನಕೀರ್ತಿ ಜೈನ್ ಹಾಗೂ ಸಮಿತಿಯ ವಿವಿಧ ಪದಾಧಿಕಾರಿಗಳು, ಗಣ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.









