






ಬೆಳ್ತಂಗಡಿ: ಉಜಿರೆ ಉಪವಿಭಾಗದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ, ಮೇ 8ರ ಶುಕ್ರವಾರದಂದು ತಾಲೂಕಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಗುರುವಾಯನಕೆರೆ ವಿದ್ಯುತ್ ಉಪಕೇಂದ್ರದಿಂದ ಕಕ್ಕಿಂಜೆ ಉಪಕೇಂದ್ರಕ್ಕೆ ವಿದ್ಯುತ್ ಸರಬರಾಜು ಮಾಡುವ 33 ಕೆವಿ ಕಕ್ಕಿಂಜೆ ಹಾಗೂ 33 ಕೆವಿ ಪಿಲಿಕ್ಕಳ ವಿದ್ಯುತ್ ಮಾರ್ಗಗಳಲ್ಲಿ ತುರ್ತು ದುರಸ್ತಿ ಕಾರ್ಯ ನಡೆಯಲಿದೆ. ಈ ಕಾರಣದಿಂದಾಗಿ ಅಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ಈ ಕೆಳಗಿನ ಫೀಡರ್ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.


ಪಿಲಿಕ್ಕಳ ಫೀಡರ್: ತೋಟತ್ತಾಡಿ, ಚಿಬಿದ್ರೆ, ನೆರಿಯ ಗ್ರಾಮಗಳು.ಚಾರ್ಮಾಡಿ ಫೀಡರ್: ಚಾರ್ಮಾಡಿ, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ ಗ್ರಾಮಗಳು.ಮುಂಡಾಜೆ ಫೀಡರ್: ಮುಂಡಾಜೆ, ಕಲ್ಮಂಜ ಗ್ರಾಮಗಳು.ದಿಡುಪೆ ಫೀಡರ್: ದಿಡುಪೆ ಮತ್ತು ಕೊಲ್ಲಿ ಪ್ರದೇಶಗಳು.ಅಲ್ಲದೆ, 33 ಕೆವಿ ಪೆಟ್ರೋನೆಟ್ ಮತ್ತು 33 ಕೆವಿ HPCL ಸ್ಥಾವರಗಳಿಗೂ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಈ ಈ ಬಗ್ಗೆ ಗಮನಹರಿಸಿ ಮೆಸ್ಕಾಂನೊಂದಿಗೆ ಸಹಕರಿಸಬೇಕಾಗಿ ಉಜಿರೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ವಿನಂತಿಸಿದ್ದಾರೆ.









