ಮಾಚಾರು ಮಖಾಂ ಉರೂಸ್ ಸೌಹಾರ್ದತೆಯ ಸಮಾರೋಪ ಮಹಾತ್ಮರ ಸ್ಮರಣೆ ಮದರಸದಲ್ಲಿ ಕಲಿತ ಸಂಸ್ಕಾರ -ಯು. ಟಿ. ಖಾದರ್

0

ಉಜಿರೆ : ಮಾಚಾರಿನ ಪವಿತ್ರ ನೆಲೆಯಲ್ಲಿ ಎರಡು ವರ್ಷಕ್ಕೊಮ್ಮೆ ಜರುಗುವ ಮುಹಮ್ಮದ್ ವಲಿಯುಲ್ಲಾಹಿ ದರ್ಗಾ ಶರೀಫ್ ಉರೂಸ್ ಮುಬಾರಕ್ ಕಾರ್ಯಕ್ರಮ ಎ. 11 ರಂದು ಅತ್ಯಂತ ಭಕ್ತಿ-ಭಾವ ಹಾಗೂ ಸಡಗರದೊಂದಿಗೆ ಸಂಪನ್ನಗೊಂಡಿತು. ಆಧ್ಯಾತ್ಮಿಕ ಚಿಂತನೆ ಮತ್ತು ಕೋಮು ಸೌಹಾರ್ದತೆಯ ಸಂದೇಶ ಸಾರಿದ ಈ ಸಮಾರೋಪ ಸಮಾರಂಭವು ಸಾವಿರಾರು ಜನರ ಉಪಸ್ಥಿತಿಗೆ ಸಾಕ್ಷಿಯಾಯಿತು.

ಜಮಾಅತ್ ಅಧ್ಯಕ್ಷ ಬಿ.ಎಮ್. ಇಲ್ಯಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಖತೀಬರಾದ ಸಲೀಮ್ ಸಖಾಫಿ ಭದ್ರಾವತಿ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಸ್ವಾಗತತಿಸಿದರು. ಖ್ಯಾತ ವಾಗ್ಮಿ ಎಮ್.ಎ. ಇಸ್ಮಾಯಿಲ್ ಸ‌ಅದಿ ಅಲ್-ಅಫ್ಳಲಿ ಮಾಚಾರ್ ಅವರು ಉರೂಸ್‌ನ ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಮರ್ಕಝ್ ಪ್ರೊಫೆಸರ್ ಅಸ್ಸಯ್ಯದ್ ಜಝೀಲ್ ಶಾಮಿಲ್ ಇರ್ಫಾನಿ ತಂಙಳ್ ಅವರು ಮುಖ್ಯ ಪ್ರಭಾಷಣ ನೀಡಿ, ಸಮಾರೋಪ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಮಂಗಲ ಹಾಡಿದರು.

ನಂತರ ನಡೆದ ಸೌಹಾರ್ದತೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ. ಖಾದರ್ ಭಾಗವಹಿಸಿ ಮಾತನಾಡಿ, “ಮಹಾತ್ಮರ ಸ್ಮರಣೆಯ ಇಂತಹ ಉರೂಸ್ ಕಾರ್ಯಕ್ರಮಗಳು ನಾವು ಮದ್ರಸಗಳಲ್ಲಿ ಕಲಿತ ಸಂಸ್ಕಾರದ ಭಾಗವಾಗಿದೆ. ಇದು ಮನುಷ್ಯರನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿದೆ,” ಸೌಹಾರ್ದಯುತ ಸಮಾಜಕ್ಕಾಗಿ ನಾವೆಲ್ಲಾ ಶ್ರಮಿಸೋಣ. ಒಗ್ಗಟ್ಟಿನಿಂದ ಯಶಸ್ವಿ ಖಂಡಿತಾ ಇದೆ ಎಂದು ಅಭಿಪ್ರಾಯಪಟ್ಟರು. ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಮಾತನಾಡಿ, “ಮಾಚಾರು ಉರೂಸ್‌ನಂತಹ ವೇದಿಕೆಗಳು ಸಮಾಜದಲ್ಲಿ ಸೌಹಾರ್ದತೆಯನ್ನು ಗಟ್ಟಿಗೊಳಿಸುವ ಉತ್ತಮ ಕೊಂಡಿಗಳಾಗಿವೆ,” ಎಂದರು.

ವೇದಿಕೆಯಲ್ಲಿ ಮಂಗಳೂರು ತಾ.ಪಂ. ಮಾಜಿ ಸದಸ್ಯ ಜಬ್ಬಾರ್ ಬೋಳಿಯಾರ್, ಮಾಜಿ ಮೇಯರ್ ಅಶ್ರಫ್, ಅಡ್ವೊಕೇಟ್ ನೂರುದ್ದೀನ್ ಸಾಲ್ಮರ, ನವಾಝ್ ನರಿಂಗಾನ, ರಾಮ್ ಪ್ರಸಾದ್, ಜಿಲ್ಲಾಸ್ಪತ್ರೆಯ ಸದಸ್ಯ ಕರೀಂ ಗೇರುಕಟ್ಟೆ, ಕೆ.ಎಂ.ಜೆ. ನಾಯಕ ಅಬ್ಬೊನ್ ಮದ್ದಡ್ಕ, ಯು.ಕೆ. ಮಹಮ್ಮದ್ ಹನೀಫ್ ಉಜಿರೆ, ಅಬೂಬಕ್ಕರ್ ಸುಪ್ರೀಂ, ಅಬ್ಬಾಸ್ ಬಟ್ಲಡ್ಕ, ಪ್ರೊಫೆಸರ್ ಇಕ್ಬಾಲ್ ಮಾಸ್ಟರ್ ಮಾಚಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಅಬ್ದುರಹ್ಮಾನ್ ಬಾಖವಿ, ಎ ಜೆ ಎಂ ಬೆಳಾಲ್ ಖತೀಬ್ ಬದ್ರುದ್ದೀನ್ ಮದನಿ, ಸದರ್ ನಾಸಿರ್ ಮುಈನಿ, ಎಸ್ ಎಸ್ ಎಫ್ ರಾಜ್ಯ ಕಾರ್ಯದರ್ಶಿ ರಶೀದ್ ಮಡಂತ್ಯಾರು, ಬೆಳಾಲು ಅನ್ಸಾರಿಯ ಜುಮಾ ಮಸ್ಜಿದ್ ಉಸ್ತುವಾರಿ ಆದಂ ಟಿ. ಹೆಚ್.,ಪಳ್ಳಿದಡ್ಕ ಅಧ್ಯಕ್ಷ ಹಕೀಂ ಮದನಿ, ರಿಯಾಝ್ ನಿಡಿಗಲ್, ಕೋಶಾಧಿಕಾರಿ ಹಸೈನಾರ್ ಟೈಲ್ಸ್, ಉಪಾಧ್ಯಕ್ಷ ಸಲೀಂ ಅಂಗಡಿ, ಎಸ್. ವೈ.. ಎಸ್ ಅಧ್ಯಕ್ಷ ರಹೀಮ್ ಹನೀಫಿ, ಕೆ ಎಂ ಜೆ ಕಾರ್ಯದರ್ಶಿ ಯು. ಕೆ. ಇಲ್ಯಾಸ್ ಮದನಿ, ಎಸ್ ಎಸ್ ಎಫ್ ಅಧ್ಯಕ್ಷ ಬಶೀರ್ ಕುದುರು, ಉಪಸ್ಥಿತರಿದ್ದರು ಮಲ್‌ಜ‌ಅ್‌ ಮ್ಯಾನೇಜರ್ ಎಂ.ಶರೀಫ್ ಬೆರ್ಕಳ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here