ಕಲ್ಮಂಜ : ಕಲ್ಮಂಜ ಗ್ರಾಮದ 89 ಬೂತ್ ಸಂಖ್ಯೆಯ ಮಾಜಿ ಗ್ರಾಮ ಪಂಚಾಯತ್ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ

0

ಬೆಳ್ತಂಗಡಿ ಜನತಾ ಪಾರ್ಟಿ ಬೆಳ್ತಂಗಡಿ ಇದರ ಕಲ್ಮಂಜ – ಬೂತ್ ಸಂಖ್ಯೆ 89ರ ಪಕ್ಷದ ಸಭೆಯು ಎಪ್ರಿಲ್ 12‌ರಂದು ಬೂತ್ ಅದ್ಯಕ್ಷ ಮದಿಮಲ್ ಕಟ್ಟೆ ಅನಿಲ್ ಗೌಡರ ಮನೆಯಲ್ಲಿ ನಡೆಯಿತು.

ಈ ಸಭೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಾಗಿ 05 ವರ್ಷಗಳ ಕಾಲ ನಮ್ಮೂರಿನ ಸೇವೆಗೈದ ಗ್ರಾ.ಪಂ. ಸದಸ್ಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಶಕ್ತಿ ಕೇಂದ್ರದ ಅದ್ಯಕ್ಷ ಶ್ರೀಧರ್, ಕಲ್ಮಂಜ ಗ್ರಾಮ ಪ್ರಭಾರಿ ಪೂರ್ಣಿಮಾ, ಬೂತ್ ಅಧ್ಯಕ್ಷ ಅನಿಲ್, ಪಂಚಾಯತ್ ಮಾಜಿ ಸದಸ್ಯರುಗಳಾದ ಪ್ರವೀಣ್ ಮತ್ತು ಶೋಭಾವತಿ, ಹಿರಿಯರಾದ ಶ್ರೀನಿವಾಸ ರಾವ್ ಕಲ್ಮಂಜ ,ಎಸ್ಸಿ ಮೋರ್ಚ ಜಿಲ್ಲಾ ಉಪಾಧ್ಯಕ್ಷ ರಾಘವ ಕಲ್ಮಂಜ ಮತ್ತು ಕಾರ್ಯಕರ್ತರು ಉಪಸ್ಥಿತಿತರಿದ್ದರು ಸಾಂತಪ್ಪ ಎಮ್. ಸ್ವಾಗತಿಸಿ, ಅನಿಲ್ ಮದ್ಮಲ್ಕಟ್ಟೆ ಧನ್ಯವಾದವಿತ್ತರು..

LEAVE A REPLY

Please enter your comment!
Please enter your name here