






ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರ ಉಜಿರೆ ಇಲ್ಲಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳ ವತಿಯಿಂದ ” ಹಿರಿಯ ನಾಗರಿಕರಿಗೆ ಪೋಷಣೆ ಮತ್ತು ಯೋಗ” ಏಪ್ರಿಲ್ 4ರಂದು ಹಳೆಪೇಟೆ ಅಂಗನವಾಡಿಯಲ್ಲಿ ಕಾರ್ಯಕ್ರಮ ನಡೆಯಿತು.


ಡಾ. ನವ್ಯ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಾಯಿಲ ಪ್ರಾಥಮಿಕ ಆರೋಗ್ಯ ಕೇಂದ್ರ ಅಧಿಕಾರಿ ವಿಭಾಗದ ಸರಸ್ವತಿ, ವಹಿಸಿದ್ದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಉಜಿರೆ ವಿದ್ಯಾರ್ಥಿನಿ ಡಾ. ನವ್ಯ ಮಾತನಾಡಿ ಯೋಗವು ದೇಹ ಮತ್ತು ಮನಸ್ಸಿನ ಸಮತೋಲನವನ್ನು ಕಾಪಾಡುತ್ತದೆ.ಪ್ರತಿದಿನ ಯೋಗ ಮಾಡಿದರೆ ಒತ್ತಡ (stress) ಕಡಿಮೆಯಾಗುತ್ತದೆ. ಸಮತೋಲನ ಆಹಾರ (balanced diet) ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ ಎಂದು ಪೋಷಣೆ ಮತ್ತು ಯೋಗದ ಕುರಿತಾಗಿ ಹಿರಿಯ ನಾಗರಿಕರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಅಖಿಲೇಶ್, ಬಿಂದು ಬಿ ಆರ್, ಸ್ಮೃತಿ ಆರ್, ಹರ್ಷಿತಾ ಕೆ ಎಸ್. ಇವರು ನಡೆಸಿಕೊಟ್ಟರು.









