






ಮಡಂತ್ಯಾರು : ಮಡಂತ್ಯಾರು ರೋಟರಿ ಕ್ಲಬ್ ವತಿಯಿಂದ ಮಡಂತ್ಯಾರು ಗಾರ್ಡಿಯಾನ್ ಏಂಜಲ್ಸ್ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ತರ ಬೆಳ್ಳಿ ಹಬ್ಬದ ಸವಿ ನೆನಪಿಗಾಗಿ ಪೋಡಿಯಂ ಕೊಡುಗೆಯನ್ನು ಎ. 7ರಂದು ಹಸ್ತಾಂತರಿಸಿದರು.


ರೋಟರಿ ಕ್ಲಬ್ ಅಧ್ಯಕ್ಷ ರೋ. ಪಿಹೆಚ್ಎಫ್ ಮ್ಯಾಕ್ಸಿಮ್ ಅಲ್ಬುಕರ್ಕ್, ಕಾರ್ಯದರ್ಶಿ ರೋ. ಪಿಹೆಚ್ಎಫ್ ವಾಸುದೇವಾ ಗೌಡ, ನಿಯೋಜಿತ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ರೊ. ರೋನಾಲ್ಡ್ ಮಿರಾಂದ, ರೊ. ಸೆಲೆಸ್ಟಿನ್ ಡಿಸೋಜ ಉಪಸ್ಥಿತರಿದ್ದರು. ಅಧ್ಯಕ್ಷ ಮ್ಯಾಕ್ಸಿಮ್ ಅಲ್ಬುಕರ್ಕ್ ಈ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು ಈ ಕೊಡುಗೆಯನ್ನು ಅವರೇ ಶಾಲೆಗೆ ನೀಡಿರುತ್ತಾರೆ.
ಶಾಲಾ ಸಂಚಾಲಕರು ವಂ. ಫಾ. ಸ್ಟಾನಿ ಗೋವಿಯಸ್, ಶಾಲಾ ಮುಖ್ಯ್ಯೊ ಪಾಧ್ಯಾಯಿನಿ, ಶಿಕ್ಷಕ ವೃಂದ, ಮಕ್ಕಳು ಕೊಡುಗೆ ಯನ್ನು ಸ್ವೀಕರಿಸಿದರು.









