ಬಂದಾರು: ಕುರಾಯ ಶ್ರೀ ಸದಾಶಿವ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ; ‘ದೇವಿ ಮಹಾತ್ಮೆ’ ಯಕ್ಷಗಾನ ಸೇವೆ

0

ಬಂದಾರು: ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಶ್ರೀ ಕ್ಷೇತ್ರ ಕುರಾಯ ಸದಾಶಿವ ದೇವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವವು ಜರುಗಿತು.

ಏಪ್ರಿಲ್ 02 ರಿಂದ 10 ರವರೆಗೆ ನಡೆಯುತ್ತಿರುವ ಈ ಧಾರ್ಮಿಕ ಉತ್ಸವವು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯರವರ ಮಾರ್ಗದರ್ಶನದಲ್ಲಿ, ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ಪೌರೋಹಿತ್ಯದಲ್ಲಿ ವೈದಿಕ ಮತ್ತು ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.

ಏಪ್ರಿಲ್ 09 ರಂದು ಬೆಳಿಗ್ಗೆ ಗಣಹವನ, ಕವಟೋದ್ಘಾಟನೆ, ಕಟೀಲು ಮೇಳದ ದೇವರಿಗೆ ಮಹಾಪೂಜೆ ಹಾಗೂ ಶ್ರೀ ಸದಾಶಿವ ದೇವರಿಗೆ ರುದ್ರಾಭಿಷೇಕ ನೆರವೇರಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಪಿಲಿಚಾಮುಂಡಿ ದೈವದ ನೇಮೋತ್ಸವ, ಶ್ರೀ ದೇವರ ಆರಾಟೋತ್ಸವ, ಅವಭೃತ ಸ್ನಾನ ಹಾಗೂ ಧ್ವಜ ಅವರೋಹಣ ಕಾರ್ಯಕ್ರಮಗಳು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನಡೆದವು.

ರಾತ್ರಿ ಕುರಾಯ-ಬಂದಾರು ಯಕ್ಷಗಾನ ಬಯಲಾಟ ಸಮಿತಿಯ ವತಿಯಿಂದ ಹಾಗೂ ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣರ ಆಶೀರ್ವಾದಗಳೊಂದಿಗೆ, ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ ‘ಸಂಪೂರ್ಣ ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

ದೇವಸ್ಥಾನದ ಆಡಳಿತಾಧಿಕಾರಿಗಳು, ಜಾತ್ರೋತ್ಸವ ಸಮಿತಿ, ಅಭಿವೃದ್ಧಿ ಸಮಿತಿ ಹಾಗೂ ಯಕ್ಷಗಾನ ಸಮಿತಿಯ ಪದಾಧಿಕಾರಿಗಳು, ಅರ್ಚಕರು ಮತ್ತು ಸಾವಿರಾರು ಭಕ್ತವೃಂದ ಉಪಸ್ಥಿತರಿದ್ದು ದೇವರ ಕೃಪೆಗೆ ಪಾತ್ರರಾದರು

LEAVE A REPLY

Please enter your comment!
Please enter your name here