ಶ್ರೀ ಕ್ಷೇತ್ರ ಕುರಾಯದಲ್ಲಿ ‘ಕುರಾಯದೊಡೆಯ’ ಭಕ್ತಿಗೀತೆ ಲೋಕಾರ್ಪಣೆ

0

ಬಂದಾರು: ಇಲ್ಲಿನ ಶ್ರೀ ಕ್ಷೇತ್ರ ಕುರಾಯ ಸದಾಶಿವ ದೇವಸ್ಥಾನದಲ್ಲಿ ಏಪ್ರಿಲ್ 02 ರಿಂದ 10 ರವರೆಗೆ ಅದ್ಧೂರಿಯಾಗಿ ನಡೆಯುತ್ತಿರುವ ಪ್ರತಿಷ್ಠಾ ಮಹೋತ್ಸವ ಹಾಗೂ ಜಾತ್ರೋತ್ಸವದ ಪ್ರಯುಕ್ತ, ದೇವಸ್ಥಾನದ ಕುರಿತಾದ ‘ಕುರಾಯದೊಡೆಯ’ ಭಕ್ತಿಗೀತೆಯ ಧ್ವನಿ ಸುರುಳಿಯನ್ನು ಏಪ್ರಿಲ್ 4 ರಂದು ಬಿಡುಗಡೆಗೊಳಿಸಲಾಯಿತು.

ನೀಲೇಶ್ವರ ಆಲಂಬಾಡಿ ವೈಷ್ಣವ್ ತಂತ್ರಿಗಳು ತಮ್ಮ ಅಮೃತ ಹಸ್ತದಿಂದ ಈ ಭಕ್ತಿಗೀತೆಯನ್ನು ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು.ಈ ಭಕ್ತಿಗೀತೆಗೆ ಮೇಘನ ಪ್ರಶಾಂತ್ ಹೊಳ್ಳ ಬೈಪಾಡಿ ಅವರು ಸಾಹಿತ್ಯ ರಚಿಸಿದ್ದು, ಮಾಸ್ಟರ್ ಸರ್ವಾರ್ಥ ಜೈನ್ ಹಾಗೂ ಅಶ್ವಿಜಾ ಶ್ರೀಧರ್ ಭಟ್ ಅವರು ಸುಶ್ರಾವ್ಯವಾಗಿ ಧ್ವನಿ ನೀಡಿದ್ದಾರೆ.

ಈ ಹಾಡಿನ ರೆಕಾರ್ಡಿಂಗ್ ಕಾರ್ಯವು ಗುರುವಾಯನಕೆರೆಯ ‘ಮಾಸ್ಟರ್ ರೆಕಾರ್ಡಿಂಗ್’ ಸ್ಟುಡಿಯೋದಲ್ಲಿ ನಡೆದಿದೆ.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿಗಳು, ಜಾತ್ರೋತ್ಸವ ಸಮಿತಿ, ಅಭಿವೃದ್ಧಿ ಸಮಿತಿ ಹಾಗೂ ಯಕ್ಷಗಾನ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಲ್ಲದೆ ದೇವಸ್ಥಾನದ ಅರ್ಚಕರು, ಪ್ರಮುಖ ಗಣ್ಯರು ಹಾಗೂ ನೂರಾರು ಭಕ್ತಾಭಿಮಾನಿಗಳು ಈ ಸಮಾರಂಭಕ್ಕೆ ಸಾಕ್ಷಿಯಾದರು.

LEAVE A REPLY

Please enter your comment!
Please enter your name here