ಜೆಸಿಐ ಕಡಲೋತ್ಸವ 2026: ಜೆಸಿಐ ಬೆಳ್ತಂಗಡಿ ಘಟಕಕ್ಕೆ ನೃತ್ಯದಲ್ಲಿ ಪ್ರಥಮ ಹಾಗೂ ವಾಲಿಬಾಲ್‌ನಲ್ಲಿ ದ್ವಿತೀಯ ಸ್ಥಾನ

0

ಬೆಳ್ತಂಗಡಿ: ಜೆಸಿಐ ಇಂಡಿಯಾ ವಲಯ 15ರ ವತಿಯಿಂದ ಜೆಸಿಐ ಕಟಪಾಡಿ ಘಟಕದ ಆತಿಥ್ಯದಲ್ಲಿ ಆಯೋಜಿಸಲಾಗಿದ್ದ “ಕಡಲೋತ್ಸವ 2026” ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವವು ಏ.6 ರಂದು ನಡೆಯಿತು.

ಸಾಂಸ್ಕೃತಿಕ ವಿಭಾಗದ ನೃತ್ಯ ಸ್ಪರ್ಧೆಯಲ್ಲಿ ಜೆಸಿಐ ಬೆಳ್ತಂಗಡಿ ಘಟಕವು ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡರೆ, ಕ್ರೀಡಾ ವಿಭಾಗದ ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ರನ್ನರ್-ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಈ ಯಶಸ್ಸಿನ ಸಂದರ್ಭದಲ್ಲಿ ಜೆಸಿಐ ಬೆಳ್ತಂಗಡಿ ಘಟಕದ ಪೂರ್ವಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here