ದಕ್ಷಿಣ ಕನ್ನಡ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಂಪ್ರೀತ ಎಸ್ ಶೆಟ್ಟಿಗಾರ್ ರ “ಅಂತಾರಾಳದ ಧ್ವನಿ” ಕೃತಿ ಬಿಡುಗಡೆ

0

ಶಿಬಾಜೆ;ದಕ್ಷಿಣ ಕನ್ನಡ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನಬಿ ಸಿ ರೋಡ್ ನ ಸ್ಪರ್ಶ ಕಲಾ ಮಂದಿರದಲ್ಲಿ ಚಿದಂಬರ ಬೈಕಂಪಾಡಿ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯುತ್ತಿದ್ದು ಮಾರ್ಚ್ 27ರಂದು ತುಳು ಮತ್ತು ಕನ್ನಡ ವಿದ್ವಾಂಸರು ವಿಶ್ರಾಂತ ಕುಲಪತಿಗಳು ಆಗಿರುವ ಪ್ರೊಫೆಸರ್ ಚಿನ್ನಪ್ಪ ಗೌಡರವರು ಹಲವಾರು ನೂತನ ಕೃತಿಗಳನ್ನು ಲೋಕಾರ್ಪಣೆ ಗೊಳಿಸಿದ್ದು ಇದರಲ್ಲಿ ಬೆಳ್ತಂಗಡಿ ತಾಲೂಕು ಶಿಬಾಜೆ ಗ್ರಾಮದ ಪೆರ್ಲ ಖಂಡಿಗ ನಿವಾಸಿ ಸಂಜೀವ ಶೆಟ್ಟಿಗಾರ್ ಮತ್ತು ಗೀತಾ ಎಸ್ ಶೆಟ್ಟಿಗಾರ್ ಮಗಳಾಗಿರುವ ಸಂಪ್ರೀತ ಎಸ್ ಶೆಟ್ಟಿಗಾರ್ ರಚಿಸಿರುವ “ಅಂತಾರಾಳದ ಧ್ವನಿ “ಕೃತಿ ಯು ಬಿಡುಗಡೆಗೊಂಡಿತು.

ಇವರು ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿ ಸಿ ಎ ವಿದ್ಯಾರ್ಥಿನಿಯಾಗಿದ್ದು ಕಲೆ, ಸಾಹಿತ್ಯ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ಉಳ್ಳವರಾಗಿದ್ದಾರೆ.

LEAVE A REPLY

Please enter your comment!
Please enter your name here