







ಬೆಳ್ತಂಗಡಿ: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ), ಬೆಳ್ತಂಗಡಿ ಉಪವಿಭಾಗದ ವ್ಯಾಪ್ತಿಯಲ್ಲಿ 2025-26ನೇ ಆರ್ಥಿಕ ವರ್ಷದ ಅಂತ್ಯದ ಹಿನ್ನೆಲೆಯಲ್ಲಿ ಬಾಕಿ ಇರುವ ವಿದ್ಯುತ್ ಬಿಲ್ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಸಂಗ್ರಹಿಸಲು ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದೆ.
ಗ್ರಾಹಕರ ಅನುಕೂಲಕ್ಕಾಗಿ ಸತತ ಮೂರು ದಿನಗಳ ಕಾಲ ರಜಾದಿನಗಳಲ್ಲೂ ಕಚೇರಿಗಳು ಕಾರ್ಯನಿರ್ವಹಿಸಲಿವೆ. ದಿನಾಂಕ ಮಾರ್ಚ್ 28, 2026 (ನಾಲ್ಕನೇ ಶನಿವಾರ), ಮಾರ್ಚ್ 29 (ಭಾನುವಾರ) ಹಾಗೂ ಮಾರ್ಚ್ 30 (ಸೋಮವಾರ) ರಂದು ಮೆಸ್ಕಾಂನ ಬೆಳ್ತಂಗಡಿ ಮತ್ತು ಉಜಿರೆ ಉಪವಿಭಾಗದ ಕಚೇರಿಗಳಲ್ಲಿ ನಗದು ಕೌಂಟರ್ಗಳು ಸಾರ್ವಜನಿಕರಿಗೆ ಲಭ್ಯವಿರುತ್ತವೆ.


ಪ್ರಮುಖ ವಿವರಗಳು:ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 3:30 ರವರೆಗೆ. ಪಾವತಿಸಬೇಕಾದ ವಿವರ: ಮಾರ್ಚ್-2026 ರವರೆಗಿನ ವಿದ್ಯುತ್ ಬಿಲ್ ಮತ್ತು ಹೆಚ್ಚುವರಿ ಭದ್ರತಾ ಠೇವಣಿ (Additional Security Deposit).ಎಚ್ಚರಿಕೆ: ಆರ್ಥಿಕ ವರ್ಷದ ಅಂತ್ಯದೊಳಗೆ ಬಾಕಿ ಪಾವತಿಸದ ಗ್ರಾಹಕರ ವಿದ್ಯುತ್ ಸಂಪರ್ಕವನ್ನು ಮೆಸ್ಕಾಂ ನಿಯಮಾನುಸಾರ ಕಡಿತಗೊಳಿಸಲಾಗುವುದು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದುದರಿಂದ, ಬೆಳ್ತಂಗಡಿ ಮತ್ತು ಉಜಿರೆ ಭಾಗದ ಗ್ರಾಹಕರು ಈ ಅವಕಾಶವನ್ನು ಬಳಸಿಕೊಂಡು ತೊಂದರೆಯಾಗದಂತೆ ತಮ್ಮ ಬಾಕಿಯನ್ನು ಪಾವತಿಸಲು ವಿನಂತಿಸಲಾಗಿದೆ.









