ಇರಾನ್ ವಿರುದ್ಧದ ಯುದ್ಧ ಖಂಡಿಸಿ ಸಿಐಟಿಯು, ಎಐಕೆಎಸ್, ಡಿ.ವೈಎಫ್‌ಐ., ಜೆ.ಎಂ.ಎಸ್, ಡಿ.ಎಚ್.ಎಸ್, ಆದಿವಾಸಿ ಸಂಘಟನೆಗಳಿಂದ ಪ್ರತಿಭಟನೆಅಲಿಪ್ತ ನೀತಿಯ ವಿರುದ್ಧ ಕೇಂದ್ರ ಸರಕಾರ ನಡೆಯುತ್ತಿರುವುದು ಸಂವಿಧಾನಕ್ಕೆ ಬಗೆಯುವ ಅಪಚಾರ: ಯಾದವ ಶೆಟ್ಟಿ

0

ಬೆಳ್ತಂಗಡಿ: ನಮ್ಮ ದೇಶದ ಅಲಿಪ್ತ ನೀತಿಯ ವಿರುದ್ಧ ಕೇಂದ್ರ ಸರಕಾರ ನಡೆಯುತ್ತಿರುವುದು ಸಂವಿಧಾನಕ್ಕೆ ಬಗೆಯುವ ಅಪಚಾರ ಆಗಿದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕೆ.ಯಾಧವ ಶೆಟ್ಟಿ ಹೇಳಿದರು.
ಬೆಳ್ತಂಗಡಿ ತಾಲೂಕು ಕಚೇರಿ ಎದುರು ಮಾ.೨೩ರಂದು ಸಿಐಟಿಯು, ಎಐಕೆಎಸ್, ಡಿ.ವೈಎಫ್‌ಐ., ಜೆ.ಎಂ.ಎಸ್, ಡಿ.ಎಚ್.ಎಸ್. ಆದಿವಾಸಿ ಮೊದಲಾದ ಸಂಘಟನೆಗಳು ಅಮೇರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ಯುದ್ಧವನ್ನು ಖಂಡಿಸಿ ನಡೆಸಿದ ಪ್ರತಿಭಟನೆಯನ್ನುzಶಿ ಅವರು ಮಾತನಾಡಿದರು. ಇಡೀ ಜಗತ್ತಿನ ತೈಲ ಉತ್ಪಾದನೆ ಮತ್ತು ವಿತರಣೆಯ ಸಂಪೂರ್ಣ ಹಿಡಿತ ತನ್ನ ಕೈಕ್ಕೆ ಬರುವಂತೆ ಮಾಡಲು ಅಮೇರಿಕ ನಡೆಸುತ್ತಿರುವ ಈ ಅಕ್ರಮ ಯುದ್ಧಗಳ ತಡೆಯಲು ಭಾರತ ಮುಂದಾಗಬೇಕೆಂದು ಅವರು ಅಗ್ರಹಿಸಿದರು.

ಸರ್ವಾಧಿಕಾರಿ ನಡೆ: ಸಿಐಟಿಯು ದ.ಕ. ಜಿಲ್ಲಾಧ್ಯಕ್ಷರಾದ ನ್ಯಾಯವಾದಿ ಬಿ.ಎಂ.ಭಟ್ ಮಾತನಾಡಿ ಒಂದು ದೇಶ ಮತ್ತೊಂದು ದೇಶದ ಸಾರ್ವಭೌಮತೆಯ ಮೇಲೆ ದಾಳಿ ನಡೆಸುವುದು ಅಮೇರಿಕಾದ ಸರ್ವಾಧಿಕಾರಿ ನಡೆಯಾಗಿದೆ ಎಂದರು. ಅಮೇರಿಕಾದ ಸರ್ವಾಧಿಕಾರಿ ನಡೆಯನ್ನು ಬೆಂಬಲಿಸುವುದು ಎಂದರೆ ಅದರ ಗುಲಾಮಗಿರಿಗೆ ಬಲಿಯಾದಂತೆ ಆಗಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅರಿತುಕೊಂಡು ದೇಶದ ಸ್ವಾಭಿಮಾನದ ಗೌರವ ಉಳಿಸಬೇಕಿದೆ ಎಂದು ಹೇಳಿದ ಅವರು ಬಂಡವಾಳಶಾಹಿಗಳ ಒಳಗಿನ ಬಿಕ್ಕಟ್ಟಿನಿಂದ ಪಾರಾಗಲು ಈ ಸಾಮ್ರಾಜ್ಯಾಶಾಹಿ ದೇಶಗಳು ಯುದ್ಧ ಸಾರಿ ಬಿಕ್ಕಟ್ಟಿಗೆ ತೇಪೆ ಹಾಕಿ ಬದುಕಲು ಪ್ರಯತ್ನಿಸುತ್ತವೆ. ಆದರೆ ಈ ಬಿಕ್ಕಟ್ಟಿಗೆ ಸಮಾಜವಾದವೇ ಪರ್ಯಾಯವಾಗಿದೆ. ಭಾರತ ಶಾಂತಿಯ ದೂತನಾಗಿ ಯುದ್ಧ ನಿಲ್ಲಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಹೇಳಿದರು. ಯುದ್ಧ ಜಗತ್ತಿನ ಮಾನವ ಕುಲದ ನಾಶದ ನಡೆಯಾಗಿದೆ.

ಇದನ್ನು ನಾವೆಲ್ಲ ಖಂಡಿಸಬೇಕಿದೆ. ದುಡಿಯುವ ಜನರ ಬದುಕಿಗೆ ಗಂಡಾಂತರಕಾರಿಯಾದ ಯುದ್ಧವನ್ನು ತಡೆಯಲು ಆಗ್ರಹಿಸಬೇಕಿದೆ ಎಂದು ಬಿ.ಎಂ.ಭಟ್ ಹೇಳಿದರು.
ಶ್ಯಾಮರಾಜ್ ಸ್ವಾಗತಿಸಿ ಡಿ.ಎಚ್.ಎಸ್. ರಾಜ್ಯ ನಾಯಕಿ ಈಶ್ವರಿ ವಂದಿಸಿದರು. ಮುಖಂಡರಾದ ಅಜಿ.ಎಂ.ಜೋಸ್, ಲಕ್ಷ್ಮಣ ಗೌಡ, ಜಯಶ್ರಿ, ಪುಷ್ಪ, ಕಿರಣಪ್ರಭಾ, ಕುಮಾರಿ, ಅಭಿಷೇಕ್,ಪ್ರವೀಣ್ ಎಂ.ಕೆ., ಲೋಕೇಶ್, ಅಶ್ವಿತ, ಅಪ್ಸಾ ಮೊದಲಾದವರು ಭಾಗವಹಿಸಿದ್ದರು. ಸಭೆಯ ಬಳಿಕ ತಹಶಿಲ್ದಾರ್ ಮೂಲಕ ಕೇಂದ್ರ ಸರಕಾರಕ್ಕೆ ಆಗ್ರಹ ಪತ್ರ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here