






ಉಜಿರೆ ::ಉಜಿರೆ ರುಡ್ ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾದ ಪಾಸ್ಟ್ ಪುಡ್ ತಯಾರಿಕೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಇತ್ತೀಚೆಗೆ ನಡೆಯಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉಜಿರೆ ದಿಶಾ ಸಮೂಹ ಸಂಸ್ಥೆಗಳ ಮಾಲಕ ಅರುಣ್ ಕುಮಾರ್ ಭಾಗವಹಿಸಿ ತಮ್ಮ ಉದ್ಯಮದ ಬೆಳವಣಿಗೆಯ ಪಯಣವನ್ನು ವಿವರಿಸಿ ಆಹಾರ ಉತ್ಪನ್ನ ಕ್ಷೇತ್ರದಲ್ಲಿ ಶುಚಿ ಮತ್ತು ರುಚಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ತಿಳಿಸಿದರು.
ಗ್ರಾಹಕರ ವಿಶ್ವಾಸ ಗಳಿಸಲು ಗುಣಮಟ್ಟದ ಉತ್ಪನ್ನಗಳು ಅಗತ್ಯವಾಗಿದ್ದು, ಉದ್ಯಮದಲ್ಲಿ ಪರಿಶ್ರಮ, ಶಿಸ್ತಿನ ಜೊತೆಗೆ ಹೊಸತನವನ್ನು ನಿರಂತರವಾಗಿ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ನಂತರ ತರಬೇತಿಗಾರರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು.


ರುಡ್ ಸೆಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವಿಜಯಕುಮಾರ್ ಬಿ.ಪಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ಯಾಂಕುಗಳ ಸಹಾಯವನ್ನು ಸಮರ್ಪಕವಾಗಿ ಬಳಸಿಕೊಂಡು ಸ್ವ ಉದ್ಯೋಗದಲ್ಲಿ ಯಶಸ್ಸು ಸಾಧಿಸಬಹುದು ಎಂದು ಹೇಳಿದರು.ಸಂಸ್ಥೆಯ ನಿರ್ದೇಶಕ ಅಜಯ್ ಸ್ವಾಗತಿಸಿ, ತರಬೇತಿ ಕಾರ್ಯಕ್ರಮದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು.
ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಪಿ.ವಿ. ಕಾರ್ಯಕ್ರಮವನ್ನು ನಿರ್ವಹಿಸಿದರು. ಹಿರಿಯ ಉಪನ್ಯಾಸಕ ಕೆ. ಕರುಣಾಕರ ಜೈನ್ ಧನ್ಯವಾದಗಳನ್ನು ಅರ್ಪಿಸಿದರು.ಕಾರ್ಯಕ್ರಮದಲ್ಲಿ ಅರುಣ ಪ್ರಾರ್ಥನೆ ನೆರವೇರಿಸಿದರು. ತರಬೇತಿಗಾರ ಅಶ್ವಥ್*, ಆಶ್ವಿನಿ, ಮಂಗಳಾದೇವಿ * ತಮ್ಮ ತರಬೇತಿ ಅನುಭವಗಳನ್ನು ಹಂಚಿಕೊಂಡು ಸಂಸ್ಥೆಯತ್ತ ಕೃತಜ್ಞತೆ ಸಲ್ಲಿಸಿದರು.









