ಬೆನ್ನುಹುರಿ ಅಪಘಾತಕ್ಕೊಳಗಾದವರ ಬಾಳಿಗೆ ಬೆಳಕು-ದೈಹಿಕ ನ್ಯೂನ್ಯತೆಯನ್ನು ಮೀರಿ ಸಾಧನೆಗೈದ ಕನ್ಯಾಡಿ ವಿನಾಯಕ್ ರಾವ್ ಯಶೋಗಾಥೆ

0

೩೦ವರ್ಷಗಳ ಹಿಂದೆ ಅಂದರೆ ೧೯೯೬ರ ಮಾರ್ಚ್ ೨೧ರಂದು ಕನ್ಯಾಡಿ ವಿನಾಯಕ ರಾವ್ ಅವರ ಬಾಳಿನಲ್ಲಿ ಬಹು ದೊಡ್ಡ ದುರ್ಘಟನೆ ನಡೆದಿತ್ತು. ಅದಮ್ಯ ಉತ್ಸಾಹದ ಚಿಲುಮೆಯಂತಿದ್ದ, ಎ ಕೆಲಸವನ್ನು ತಾನೇ ಸಾಧಿಸಿ ಬಿಡುವೆ ಎನ್ನುವ ಛಲಗಾರ ಪ್ರವೃತ್ತಿಯ ಕನ್ಯಾಡಿ ವಿನಾಯಕ ರಾವ್ ಅವರು ತಮ್ಮ ಮನೆಯ ವಿದ್ಯುತ್ ಅವಶ್ಯಕತೆಗಳಿಗಾಗಿ ಟ್ರಾನ್ಸ್ಫಾಮರ್ ಹತ್ತಿ ವಿದ್ಯುತ್ ಅಡಚಣೆಯನ್ನು ಸರಿಪಡಿಸಲು ಹೋಗಿ, ವಿದ್ಯುತ್ ಶಾಕ್‌ಗೆ ಒಳಗಾಗಿ ಕೆಳಗೆ ಬಿದ್ದು ದೇಹದ ಸ್ವಾಧೀನ ಕಳೆದುಕೊಂಡರು. ಇಲೆಕ್ಟ್ರಿಕಲ್‌ನಲ್ಲಿ ಡಿಪ್ಲೊಮಾ ಪದವಿ ಶಿPಣ ಪಡೆದಿದ್ದ ಇವರು ಇಲೆಕ್ಟ್ರಿಕಲ್ ಸರ್ವಿಸ್ ಉದ್ಯಮ ಮಾಡುತ್ತಿದ್ದರು. ಹಲವು ಸಮಯ ಆಸ್ಪತ್ರೆಯಲ್ಲಿದ್ದು ಪುನಃ ನಡೆದಾಡಲು ಸಾಧ್ಯವಾಗುವುದೇ ಇಲ್ಲ ಎಂಬ ಆಘಾತಕಾರಿ ವಿಷಯದೊಂದಿಗೆ ಮನೆಗೆ ಮರಳಬೇಕಾಯಿತು. ನಂತರ ಮನೆಯಂದು ಕೋಣೆಯಲ್ಲಿ ಮಂಚದ ಮೇಲೆ ಮಲಗಿದ ಪರಿಸ್ಥಿತಿಯಲ್ಲಿದ್ದು ಸಮಯ ಸರಿಸಲಾಗದಷ್ಟು ಬೇಸರ.

ಸಮಾಜ ಕಾರ್ಯಾರಂಭ: ಹಲವು ವರ್ಷಗಳಿಂದ ಆತ್ಮೀಯ ಒಡನಾಡಿಯಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಮತ್ತು ಗುರುಸಮಾನ ಗೌರವಿಸುತ್ತಿದ್ದ ಕೊಕ್ಕಡದ ಕೃಷ್ಣ ಭಟ್ ಅವರಿಗೆ ತಮ್ಮ ಜೀವನದ ನೋವುಗಳ ಬಗ್ಗೆ ಪತ್ರ ಬರೆದರು. ಮಾನಸಿಕ ಕ್ಷೆಭೆಯನ್ನು ತಿಳಿಸಿ ಈ ಪತ್ರಕ್ಕೆ ಪ್ರತಿಯಾಗಿ ಕೊಕ್ಕಡ ಕೃಷ್ಣ ಭಟ್ ಅವರು ಒಂದು ಅಮೂಲ್ಯವಾದ ಮಾತು ಹೇಳಿದರು. ಈ ಮಾತು ವಿನಾಯಕ ರಾವ್ ಅವರ ಬಾಳಿನಲ್ಲಿ ದಿಗ್ದರ್ಶನವಾಗುವ ಮಾರ್ಗಸೂಚಿ ಮಾತಾಗಿತ್ತು – ನೀನು ನಿನಗಾಗಿ ಯೋಚಿಸಬೇಡ, ನೀನು ನಿನಗಿಂತಲೂ ಕಷ್ಟದಲ್ಲಿ ಬದುಕುವವರ ಬಗ್ಗೆ ಯೋಚಿಸು. ಈ ಮಾತಿನಂತೆ ಇವರ ಊರಿನ ಪರಿಸರದ ದೊಂಪದಬಲಿ, ಕೃಷ್ಣಾಷ್ಟಮಿ, ಶಾರದೋತ್ಸವ ಇಂತಹ ಹಲವು ಉತ್ಸವಗಳ ನೇತೃತ್ವದೊಂದಿಗೆ ಸಮಾಜದ ಕೆಲಸಕ್ಕೆ, ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ವಿನಾಯಕ ರಾವ್ ಅವರು ಊರಿನಲ್ಲಿ ಮನೆಮಾತಾಗುತ್ತಾರೆ. ದಿನಗಳು ಕಳೆದಂತೆ ಸೇವಾಭಾರತಿ ಎನ್ನುವ ಸಂಸ್ಥೆ ಕಟ್ಟಿ, ಅದರ ಮೂಲಕ ಗ್ರಾಮದಲ್ಲಿ, ಹತ್ತಿರದ ಗ್ರಾಮಗಳಲ್ಲಿ ಹಾಗೂ ತಾಲೂಕಿನಲ್ಲಿ ಹಲವಾರು ಸಮಾಜೋದ್ಧಾರ ಕಾರ್ಯಕ್ರಮಗಳನ್ನು ಆರಂಭಿಸುತ್ತಾರೆ. ತಮ್ಮಂತೆ ಸಮಾಜ ಸೇವೆ ಮಾಡುವವರಿಗೆ ಪ್ರೇರಣೆಯಾಗುತ್ತಾರೆ.

ಸೇವಾಭಾರತಿ ಕನ್ಯಾಡಿ ಎಂಬ ಸಂಘಟನೆಯನ್ನು ಕಟ್ಟಿ ಹಲವು ಆಯಾಮಗಳಲ್ಲಿ ಕೆಲಸ ಮಾಡಲು ಆರಂಭಿಸುತ್ತಾರೆ – ರಕ್ತದಾನ, ಭಜನೆ, ಮಹಿಳೆಯರ ಸಬಲೀಕರಣ ಮತ್ತು ಉದ್ಯೋಗ ಸೃಜನಕ್ಕಾಗಿ ಶ್ರೀ ದುರ್ಗಾ ಮಾತೃ ಮಂಡಳಿ ಎಂಬ ಸೇವಾಭಾರತಿಯ ಅಂಗ ಸಂಸ್ಥೆಯೊಂದಿಗೆ ಟೈಲರಿಂಗ್ ತರಬೇತಿ ಶಿಬಿರಗಳು, ಕೃಷಿಕರ ಕಾರ್ಯಗಳಿಗಾಗಿ ಕೃಷಿಕರ ವೇದಿಕೆ, ಮಕ್ಕಳಿಗೆ ಸಂಸ್ಕಾರ ನೀಡುವ ಉದ್ದೇಶಕ್ಕಾಗಿ ಬಾಲಗೋಕುಲಗಳು, ಸರ್ಕಾರಿ ಶಾಲೆಗಳಿಗೆ ಉಚಿತ ಕಂಪ್ಯೂಟರ್ ಹಸ್ತಾಂತರ, ಶೌಚಾಲಯ ನಿರ್ಮಾಣ, ತಾಲೂಕಿನ ನೂರು ರೋಗಿಗಳಿಗೆ ಒಂದು ವರ್ಷದ ತನಕ ಉಚಿತ ಔಷಧ ವಿತರಣೆ ಮುಂತಾದ ಸೇವಾ ಕಾರ್ಯಗಳು ನಡೆಯುತ್ತಿವೆ.
ಬೆನ್ನುಹುರಿ ಅಪಘಾತಕ್ಕೊಳ ಗಾದವರಿಗೆ ಪುನಶ್ಚೇತನ ಕೇಂದ್ರ: ವಿನಾಯಕ ರಾವ್ ಅವರು ಅಪಘಾತಗೊಂಡು ೨೧ ವರ್ಷಗಳ ತರುವಾಯ ತಮಿಳುನಾಡಿನ ವೆಲ್ಲೂರಿನಲ್ಲಿರುವ ಬೆನ್ನುಹುರಿ ಅಪಘಾತಕ್ಕೊಳಗಾದವರ ಪುನಶ್ಚೇತನ ಕೇಂದ್ರಕ್ಕೆ ದಾಖಲಾಗಿ ಹಲವು ದಿನಗಳ ಪುನಶ್ಚೇತನವನ್ನು ಪಡೆಯುತ್ತಾರೆ. ತಮಿಳುನಾಡಿನ ವೆಲ್ಲೂರಿನಿಂದ ವಾಪಸ್ ಆಗುತ್ತಿzಗ, ವಿನಾಯಕ ರಾವ್ ಅವರು ಬೆನ್ನುಹುರಿ ಅಪಘಾತಕ್ಕೊಳಗಾದ ವ್ಯಕ್ತಿಗಳ ಸಮಗ್ರ ಪುನಶ್ಚೇತನಕ್ಕಾಗಿ ಕನ್ಯಾಡಿಯ ಸಮೀಪದಲ್ಲಿ ಒಂದು ಪುನಶ್ಚೇತನ ಕೇಂದ್ರವನ್ನು ಆರಂಭಿಸಬೇಕು ಎನ್ನುವ ಸಂಕಲ್ಪ ತೊಟ್ಟರು. ಇದರ ಮೂಲಕ ಜಿ ಮತ್ತು ಸಮೀಪದ ಜಿಗಳಲ್ಲಿ ದಿವ್ಯಾಂಗರ ಜೀವನದಲ್ಲಿ ಹೊಸ ಬೆಳಕು ಮೂಡಿಸುವ ಪ್ರಯತ್ನ ಮಾಡಬೇಕು ಎನ್ನುವ ಸಂಕಲ್ಪವನ್ನು ಮಾಡಿದರು.
ಅದರಂತೆ ಬೆಳ್ತಂಗಡಿ ತಾಲೂಕಿನ ಪ್ರಖ್ಯಾತ ಸೌತಡ್ಕ ಮಹಾಗಣಪತಿ ದೇವಸ್ಥಾನದ ಸಮೀಪ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್‌ನ ಕಟ್ಟಡದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರ ಪುನಶ್ಚೇತನ ಕೇಂದ್ರ ಆರಂಭವಾಯಿತು. ಈ ಕಟ್ಟಡವನ್ನು ಈ ಕೇಂದ್ರಕ್ಕೆ ಉಚಿತವಾಗಿ ಕೊಟ್ಟವರು ಅದೇ ಹಿರಿಯರಾದ ಕೃಷ್ಣಭಟ್‌ರವರು. ಇದೀಗ ೭ ವರ್ಷಗಳಿಂದ ಸೌತಡ್ಕದಲ್ಲಿ ಈ ಪುನಶ್ಚೇತನ ಕೇಂದ್ರವು ನಡೆಯುತ್ತಿದೆ.
ಸೇವಾಭಾರತಿಯ ಸಾಧನೆಗಳ ಪರಿಚಯ: ಸೇವಾಭಾರತಿ ಕನ್ಯಾಡಿ ಸರ್ಕಾರೇತರ ಸಂಸ್ಥೆಯಾಗಿದ್ದು, ಸಬಲಿನಿ ಯೋಜನೆಯಡಿಯಲ್ಲಿ ಟೈಲರಿಂಗ್ ಶಿಬಿರಗಳ ಮೂಲಕ ಮಹಿಳಾ ಸಬಲೀಕರಣ, ಆರೋಗ್ಯಮ್ ಯೋಜನೆಯಡಿಯಲ್ಲಿ ರಕ್ತದಾನ ಶಿಬಿರ, ಆಂಬುಲೆನ್ಸ ಸೇವೆ ಹಾಗೂ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಜೀವನ ರೂಪಿಸುವಲ್ಲಿ ಅದ್ಭುತ ಕೆಲಸ ಮಾಡುತ್ತಿದೆ. ಇಲ್ಲಿಯವರೆಗೆ ೩೫ ಉಚಿತ ಟೈಲರಿಂಗ್ ತರಬೇತಿ ಶಿಬಿರಗಳನ್ನು ಆಯೋಜಿಸಿದ್ದು, ಅದರಲ್ಲಿ ೯೪೫ ಮಂದಿ ತರಬೇತಿ ಪಡೆದಿzರೆ. ಹಾಗೆಯೇ ೧೦೩ ರಕ್ತದಾನ ಶಿಬಿರಗಳನ್ನು ಆಯೋಜಿಸಿ ೧೦,೯೬೫ ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ. ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ಮಲಗಿದ ಇದ್ದು ಗಾಯವಾಗುವುದು ಸಾಮಾನ್ಯ. ಅವರಿಗೆ ಆಸ್ಪತ್ರೆ ಚಿಕಿತ್ಸೆ ದೊರಕಿದ ನಂತರ ಸೇವಾಭಾರತಿಯ ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ಪುನಶ್ಚೇತನಗೊಂಡರೆ ಅವರ ಬಾಳಲ್ಲಿ ಹೊಸ ಬೆಳಕು ಮೂಡಿಸಬಹುದು. ಸರಿಯಾದ ಸಮಯದಲ್ಲಿ ಪುನಶ್ಚೇತನ ಲಭಿಸದಿದ್ದರೆ ದಿವ್ಯಾಂಗರು ಮಲಗಿದ ಇದ್ದು ದ್ವಿತೀಯ ಹಂತದ ಸಮಸ್ಯೆಗಳಿಂದ ಇನ್ನೂ ಹೆಚ್ಚಿನ ಯಾತನೆ ಅನುಭವಿಸುತ್ತಾರೆ. ಒಂದೆರಡು ವರ್ಷಗಳಲ್ಲಿ ಸಾವು ಸಂಭವಿಸುವುದು ಹೆಚ್ಚಾಗಿದೆ. ಆತ್ಮಹತ್ಯೆಯ ಪ್ರಮಾಣವೂ ಹೆಚ್ಚಿದೆ. ಅಂತವರನ್ನು ಸೂಕ್ತ ಸಮಯದಲ್ಲಿ ಗುರುತಿಸಿ ಅವರನ್ನು ಸPಮ ಮಾಡುವ ಕೆಲಸ ಸೇವಾಧಾಮದ ಮೂಲಕ ನಡೆಯುತ್ತಿದೆ. ಈಗಾಗಲೇ ೮೦೯ ಮಂದಿ ದಿವ್ಯಾಂಗರನ್ನು ಗುರುತಿಸಿ, ಅದರಲ್ಲಿ ೩೦೯ ಮಂದಿಯನ್ನು ಪುನಶ್ಚೇತನ ಮಾಡುವ ಕಾರ್ಯ ನಿರಂತರವಾಗಿ ತಪಸ್ಸಿನಂತೆ ಸಾಗುತ್ತಿದೆ. ಹೀಗೆ ಹಲವಾರು ಮಂದಿ ಬೇರೆ ಬೇರೆ ಕೆಲಸಗಳನ್ನು ಮಾಡುತ್ತಾ ಯಾರಿಗೂ ಅವಲಂಬಿತರಾಗದೆ ತಮ್ಮ ಜೀವನವನ್ನು ಸಾಗಿಸುತ್ತಿzರೆ. ಇದು ಸೇವಾಭಾರತಿಯ ಸಾಧನೆಯಾಗಿದೆ. ಸಮಾಜ ನಿರಂತರವಾಗಿ ಈ ಒಂದು ಕಾರ್ಯಕ್ಕೆ ಸಹಾಯ ಮಾಡಿದರೆ ಈ ಮಹಾನ್ ಕೆಲಸಕ್ಕೆ ಇನ್ನಷ್ಟು ವೇಗ ಸಿಗುತ್ತದೆ, ಇನ್ನೂ ಹೆಚ್ಚು ಇಂತಹವರ ಬಾಳಿನಲ್ಲಿ ಹೊಸ ಬೆಳಕು ಮೂಡಿಸಲು ಸಾಧ್ಯವಾಗುತ್ತದೆ. ಈ ರೀತಿ ಬಾಧಿತ ವ್ಯಕ್ತಿಗಳ ಪುನಶ್ಚೇತನಕ್ಕಾಗಿ ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಬಳಿ ಸೇವಾಭಾರತಿಯ ನೇತೃತ್ವದಲ್ಲಿ ಐದು ಮಹಡಿಯ ಕಟ್ಟಡವು ಸುಮಾರು ೮ ಕೋಟಿ ವೆಚ್ಚದಲ್ಲಿ ರಾಜ್ಯದ ಸುಸಜ್ಜಿತ ದಿವ್ಯಾಂಗರ ಪುನಶ್ಚೇತನ ಕೇಂದ್ರ ನಿರ್ಮಾಣ ಹಂತದಲ್ಲಿದೆ. ಈ ಕಟ್ಟಡದಲ್ಲಿ ಈಗಾಗಲೇ ಪ್ರಧಾನ ಕಚೇರಿ ಕಾರ್ಯಾರಂಭಗೊಂಡಿದೆ. ಈ ತನಕ ಉಚಿತ ನೆಲೆಯಲ್ಲಿ ಸೌತಡ್ಕ ದೇವಾಲಯದ ಬಳಿ ೭ ವರ್ಷಗಳಿಂದ ನಡೆಯುತ್ತಿರುವ ಪುನಶ್ಚೇತನ ಕೇಂದ್ರವನ್ನು ಕನ್ಯಾಡಿಯ ಈ ಕಟ್ಟಡ ನಿರ್ಮಾಣವಾದ ತPಣ ಇಲ್ಲಿಗೆ ಸ್ಥಳಾಂತರಗೊಳಿಸಲಾಗುತ್ತದೆ. ಈ ಕೇಂದ್ರವು ಇನ್ನಷ್ಟು ದಿವ್ಯಾಂಗರಿಗೆ ಆಸರೆಯಾಗಲಿದೆ.

ಉಡುಪಿಯಲ್ಲಿ ಪುನಶ್ಚೇತನ ಕೇಂದ್ರ ಆರಂಭ: ಉಡುಪಿಯ ಹೇನಬೇರುವಿನಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾಗಿ ಗಾಯಗಳ ಗುಣಪಡಿಸುವಿಕೆಗಾಗಿ ಪುನಶ್ಚೇತನ ಕೇಂದ್ರ ಆರಂಭವಾಗಿದೆ. ಈಗಾಗಲೇ ದಿವ್ಯಾಂಗರ ಜೀವನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಎಂದರೆ, ಉಡುಪಿ ಜಿಯ ಬೈಂದೂರು ತಾಲೂಕಿನ ಹೇನಬೇರುವಿನಲ್ಲಿ ಈ ರೀತಿಯ ಬಾಧಿತ ವ್ಯಕ್ತಿಗಳ ಗಾಯಗಳ ಗುಣಪಡಿಸುವಿಕೆಗಾಗಿ ಪುನಶ್ಚೇತನ ಕೇಂದ್ರ ಈಗಾಗಲೇ ಕಾರ್ಯಾರಂಭಗೊಂಡಿದೆ.

ಆಶ್ಚರ್ಯಕರ ಹಲವು ಸಂಗತಿಗಳು: ಕನ್ಯಾಡಿ ವಿನಾಯಕ ರಾವ್ ಅವರು ಈ ಸೇವಾಭಾರತಿ ಮತ್ತು ಸೇವಾಧಾಮದ ಸಂಸ್ಥಾಪಕರು. ಇವರು ಇಂದಿಗೆ ಈ ವರ್ಷಕ್ಕೆ ಬೆನ್ನುಹುರಿ ಅಪಘಾತಕ್ಕೊಳಗಾಗಿ ೩೦ ವರ್ಷಗಳು ಕಳೆದಿವೆ. ಇದೀಗ ಅವರು ಬೆನ್ನುಹುರಿ ಅಪಘಾತಕ್ಕೊಳಗಾಗಿ ಜೀವನ ಸಂಕಷ್ಟಕ್ಕೀಡಾದಾಗ ಹಲವರ ಬಾಳಿನಲ್ಲಿ ಹೊಸ ಬೆಳಕು ಮೂಡಿಸುವಲ್ಲಿ ಬಹು ದೊಡ್ಡ ಪಾತ್ರ ವಹಿಸಿದ್ದಾರೆ. ಬೆನ್ನುಹುರಿಯ ಅಪಘಾತಕ್ಕೊಳಗಾದವರ ದೈಹಿಕ, ಮಾನಸಿಕ ಸ್ಥೈರ್ಯಕ್ಕಾಗಿ ತಮ್ಮ ಅನುಭವ ಮತ್ತು ಮಾತಿನ ಮೂಲಕ ಶೋಷಿತರ ಬಾಳಿನಲ್ಲಿ ಹೊಸ ಬೆಳಕು ಮೂಡಿಸಲು ಮಾತು ಮತ್ತು ಕೃತಿಯ ಮೂಲಕ ಸದಾ ಪ್ರಯತ್ನಿಸುತ್ತಿದ್ದಾರೆ.

ಮತ್ತೊಂದು ಆಶ್ಚರ್ಯ ಸಂಗತಿ ಎಂದರೆ, ಅಪಘಾತಕ್ಕೊಳಗಾಗಿ ಮಲಗಿದ ಪರಿಸ್ಥಿತಿಯಲ್ಲಿದ್ದ ಬೆಂಗಳೂರು ನಗರದ ಗಿರೀಶ ಅವರು ಈ ಪುನಶ್ಚೇತನ ಕೇಂದ್ರದಲ್ಲಿ ಪುನಶ್ಚೇತನಗೊಂಡ ನಂತರ ಸ್ವಂತವಾಗಿ ನಡೆದುಕೊಂಡು ತಮ್ಮ ಸಂಸಾರ ಸಾಗಿಸಿಕೊಂಡು, ಮೊದಲು ನಡೆಸುತ್ತಿದ್ದ ಲ್ಯಾಂಡ್ ಲಿಂಕ್ಸ್ ವ್ಯವಹಾರವನ್ನು ಪುನರಾರಂಭಿಸಿ ದಿವ್ಯಾಂಗರಿಗೆ ಮಾದರಿಯಾಗಿದ್ದಾರೆ. ಮೆಕ್ಯಾನಿಕ್ ಆಗಿ ದುಡಿಯುತ್ತಿದ್ದ ಮಂಗಳೂರಿನ ರಾಜಕುಮಾರ್ ಅವರು ಕೆಲಸ ಮಾಡುತ್ತಿದ್ದಾಗ ಅಪಘಾತಕ್ಕೊಳಗಾಗಿ ಬೆನ್ನುಹುರಿ ಅಪಘಾತಕ್ಕೊಳಗಾಗಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ನಂತರ ಸೇವಾಧಾಮದ ಪುನಶ್ಚೇತನ ಕೇಂದ್ರಕ್ಕೆ ಬಂದು ಅತ್ಯಲ್ಪ ಸಮಯದಲ್ಲಿ ನಡೆಯಲು ಆರಂಭಿಸಿದ್ದಾರೆ. ಬೆನ್ನುಹುರಿ ಅಪಘಾತಕ್ಕೊಳಗಾದ ಮಡಿಕೇರಿಯ ಲಕ್ಷ್ಮಿ, ಕುಂದಾಪುರದ ಇಕ್ಬಾಲ, ಶಿರಸಿಯ ಸುಬ್ರಹ್ಮಣ್ಯ ಹೆಗಡೆ, ಬಂಟ್ವಾಳದ ವೈದಿಕ ವೃತ್ತಿಯ ವೀರೇಂದ್ರ – ಇವರೆಲ್ಲ ಯಾರ ಸಹಾಯವಿಲ್ಲದೆ ನಡೆಯಲು ಆರಂಭಿಸಿರುವುದು ಆಶ್ಚರ್ಯ ಮತ್ತು ಸಾಧನೆಯ ಘಟನೆಗಳಾಗಿದೆ. ಈ ಸಾಧನೆಗಳನ್ನು ಗುರುತಿಸಿ ೨೦೧೯ರಲ್ಲಿ ಕನ್ನಡ ರಾಜ್ಯೋತ್ಸವ ಜಿ ಪ್ರಶಸ್ತಿ, ೨೦೨೦ರಲ್ಲಿ ಉತ್ತಿಷ್ಠ ಪುರಸ್ಕಾರ ಪ್ರಶಸ್ತಿ, ೨೦೨೨ರಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ರಾಜ್ಯ ಪ್ರಶಸ್ತಿ ದೊರೆತಿದೆ. ಇದು ಈ ಕೆಲಸಕ್ಕೆ ಮನ್ನಣೆ ಸಿಕ್ಕಂತಾಗಿದೆ. ಈ ರೀತಿ ಬಾಧಿತ ವ್ಯಕ್ತಿಗಳೊಂದಿಗೆ ನಮ್ಮ ಒಳ್ಳೆಯ ದಿನಗಳಲ್ಲಿ ಒಂದು ದಿನ ಅವರ ನೋವು-ನಲಿವು ಕೇಳಲು ಈ ಕೇಂದ್ರಕ್ಕೆ ಭೇಟಿ ನೀಡೋಣ ಎನ್ನುವ ವಿನಂತಿ.

ಸ್ವಂತ ಕಟ್ಟಡ ಅತ್ಯಾಧುನಿಕ ಸುಸಜ್ಜಿತ ಕೇಂದ್ರ: ಈ ಕೇಂದ್ರವು ಸ್ವಂತ ಕಟ್ಟಡದಗಬೇಕು ಎನ್ನುವ ಇನ್ನೊಂದು ಕನಸನ್ನು ಇಟ್ಟುಕೊಂಡಿದ್ದ ವಿನಾಯಕ ರಾವ್ ಅವರು ಇದೀಗ ಕನ್ಯಾಡಿಯಲ್ಲಿ ಸರ್ಕಾರದಿಂದ ಸೇವಾಭಾರತಿಗೆ ಮಂಜೂರಾದ ಜಾಗದಲ್ಲಿ ಐದು ಮಹಡಿ ಕಟ್ಟಡವನ್ನು ಅಂದಾಜು ಎಂಟು ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾಗಿ, ರಾಜ್ಯದಲ್ಲಿಯೇ ಸುಸಜ್ಜಿತ ಬೆನ್ನುಹುರಿ ಅಪಘಾತಕ್ಕೊಳಗಾದವರ ಪುನಶ್ಚೇತನ ಕೇಂದ್ರದ ನಿರ್ಮಾಣಕ್ಕಾಗಿ ಅಡಿಯಿತ್ತಿದ್ದಾರೆ. ಈಗಾಗಲೇ ಅಡಿಗಲ್ಲು ಹಾಕಿ ಎರಡು ಹಂತದ ಕಟ್ಟಡ ರಚನೆಯಾಗಿ ಕಚೇರಿ ಕಾರ್ಯಾರಂಭವಾಗಿದೆ. ಈಗಾಗಲೇ ದಕ್ಷಿಣ ಕನ್ನಡ ಜಿ ಸೇರಿದಂತೆ ಒಟ್ಟು ಆರು ಜಿಗಳಾದ ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಉತ್ತರ ಕನ್ನಡ ಜಿಗಳಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರ ಸಂಕಷ್ಟ ನಿವಾರಣೆಗೆ ವಿವಿಧ ಉಪಕ್ರಮಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ.

ಪುನಶ್ಚೇತನ ಪಡೆದುಕೊಂಡು ಸ್ವಾವಲಂಬಿ ಜೀವನ ಸಾಗಿಸಿದ ಅನೇಕರು:
ದೈಹಿಕವಾಗಿ ಪುನಶ್ಚೇತನಗೊಂವರನ್ನು ಮಾನಸಿಕವಾಗಿ ಆತ್ಮಸ್ಥೈರ್ಯ ತುಂಬಿಸುವ ಮೂಲಕ ಅವರಿಗೆ ಬದುಕು ಇನ್ನೂ ಇದೆ ಎನ್ನುವ ಅಸೆ ಚಿಗುರೊಡೆಯುವಂತೆ ಮಾಡುವ ಎ ಶ್ರಮ ಸೇವಾಭಾರತಿಯಿಂದ ನಡೆಯುತ್ತಿದೆ. ನಂತರ ದಿವ್ಯಾಂಗರು ಮನೆಯವರಿಗೆ ಮತ್ತು ಸಮಾಜಕ್ಕೆ ಭಾರವಾಗದಂತೆ ಬದುಕಲು ಸಣ್ಣ ಮಟ್ಟದ ಉದ್ಯೋಗ ಅಥವಾ ಉದ್ಯಮ ಮಾಡಲು ಕೂಡ ಸೇವಾಧಾಮ ಸಹಕರಿಸುತ್ತಿದೆ. ಈ ದೃಷ್ಟಿಯಲ್ಲಿ ಕೆಲವೊಂದು ಈ ರೀತಿ ಉದ್ಯೋಗ ಮಾಡುವವರನ್ನು ನೋಡಿಕೊಂಡು ಬರೋಣ…
೧. ಕನ್ಯಾಡಿಯ ಜಗದೀಶ್ ಇವರು ಕಟ್ಟಡದಿಂದ ಬಿದ್ದು ಬೆನ್ನುಹುರಿ ಅಪಘಾತಕ್ಕೊಳಗಾಗಿ ಪುನಶ್ಚೇತನ ಪಡೆದುಕೊಂಡು ಇದೀಗ ಸ್ವಾವಲಂಬಿ ಜೀವನ ಸಾಗಿಸಲು ನೀರ ಚಿಲುಮೆಯಲ್ಲಿ ಎಳೆನೀರು ವ್ಯಾಪಾರ ಮಾಡುತ್ತಾರೆ.
೨.ಉಡುಪಿಯ ಸರ್ವೋತ್ತಮ್ ಅಮೀನ್ ಇವರು ಪುನಃಶ್ಚೇತನ ಪಡೆದುಕೊಂಡು ಎರಡು ನಗರಸಭಾ ವಾರ್ಡಿನಲ್ಲಿ ನಗರ ಪುನಶ್ಚೇತನ ಕಾರ್ಯಕರ್ತನಾಗಿ (URW) ನೀಡುತ್ತಿರುವ ಸೇವೆ ಅನನ್ಯ….
೩. ವಿಟ್ಲದ ಪರಮೇಶ್ವರ್ ತಮ್ಮ ಕುಟುಂಬಕ್ಕೆ ಆಧಾರವಾಗುವ ದೃಷ್ಟಿಯಿಂದ ಪುನಶ್ಚೇತನ ಪಡೆದು ಅಡಿಕೆ ಸುಳಿಯುವ ಕೆಲಸ ಮಾಡುತ್ತ ತಮ್ಮ ಕುಟುಂಬಕ್ಕೆ ಆಧಾರಸ್ತಂಭರಾಗಿದ್ದಾರೆ.

೪. ಸುಳ್ಯದ ನವೀನ್ ಮುರಳ್ಯ ಅಡಿಕೆ, ಹೈನುಗಾರಿಕೆ, ಜೇನು ಕೃಷಿಯ ಜೀವನ ಕಂಡುಕೊಂಡ ನವೀನ್ ಮುರುಳ್ಯ ಅವರ ಜೀವನ ಉತ್ಸಾಹವೇ ಬಹಳ ಆನಂದ ಕೊಡುತ್ತದೆ.
೫. ಮೂಡಿಗೆರೆಯ ನಾಗೇಶ್ ದಿವ್ಯಾಂಗಾಂತೆಯಲ್ಲೂ ಪೊರಕೆಯನ್ನು ಮಾಡುತ್ತ ಬದುಕಲು ಸುಲಭ ಮಾರ್ಗವನ್ನು ಕಂಡುಕೊಂಡ ನಾಗೇಶರ ಜೀವನ ಎಲ್ಲರಿಗೂ ಮಾದರಿಯಾಗುವಂತಿದೆ.
೬. ಮಲ್ಪೆಯ ಜಯ ಪೂಜಾರಿ ಅವರು ಯಾರಿಗೂ ಅವಲಂಬಿತರಾಗದೆ ತಮ್ಮ ಕಾಲಿನ ಮೇಲೆ ನಿಂತುಕೊಂಡು ಎಳೆನೀರು ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿzರೆ.
೭. ನಾರಾವಿಯ ವಸಂತರು ಹತ್ತಿಯಿಂದ ಬತ್ತಿಯನ್ನು ಮಾಡಿ, ಅದನ್ನು ಮಾರಿ ತನ್ನ ಜೀವನ ನಿರ್ವಹಣೆಯ ಮಾರ್ಗವನ್ನು ಕಂಡುಕೊಂಡವರು
೮. ಪುತ್ತೂರಿನ ಕೆ. ಹರಿಶ್ಚಂದ್ರ ವಿಶೇಷ ಚೇತನರ ಶಾಲೆಯಲ್ಲಿ ಅಕೌಂಟೆಂಟ್ ಆಗಿ ಅವರು ಕೆಲಸ ಮಾಡುತ್ತಿರುವುದು ಶ್ಲಾಘನೀಯ.
೯. ಶಿರಸಿಯ ದೇವತೆ ಮನೆಯ ವಿನಯ್ ಭಟ್ಟರು ತನ್ನ ಮನೆಯ ಹತ್ತಿರ ಸಭಾಂಗಣವನ್ನು ನಿರ್ಮಿಸಿ ಶುಭ ಸಮಾರಂಭಗಳಿಗೆ ಕಟ್ಟಡ ಬಾಡಿಗೆ ಕೊಡುವುದಲ್ಲದೆ ಅಡುಗೆ ಕಾಂಟ್ರಾಕ್ಟ ಪಡೆದು ನಿರ್ವಹಿಸಿಕೊಂಡು ಯಶಸ್ವೀ ಜೀವನಮಾಡುತ್ತಿರುವುದು ಎಲ್ಲರಿಗೂ ಮಾದರಿ.
೧೦.ಮಲ್ಲಿಗೆ ವ್ಯಾಪಾರವನ್ನು ಮಾಡುತ್ತಿರುವ ಶೇಖರ್ ಬೈಪಾಡಿಯವರು ಜೀವನ ಮಾಡುತ್ತಿರುವ ರೀತಿ ನೋಡಿದರೆ ಸPಮ ವ್ಯಕ್ತಿಗೂ ಆಶ್ಚರ್ಯವಾಗುತ್ತದೆ.
೧೧. ಮೂಡಿಗೆರೆಯ ನಂದನ್ ತನ್ನ ಸಹೋದರನ ಸಹಾಯದಲ್ಲಿ ತಮ್ಮದೇ ಜಾಗದಲ್ಲಿ ನರ್ಸರಿಯನ್ನು ಮಾಡಿ ಗಿಡಗಳ ಮಾರಾಟದಿಂದ ಕುಟುಂಬದ ನಿರ್ವಹಣೆಗೆ ಆಧಾರವಾದವರು.

LEAVE A REPLY

Please enter your comment!
Please enter your name here