ಬೆಂಗಳೂರಿನ ಬಸವೇಶ್ವರ ನಗರದಲ್ಲಿ “ರಾವ್ & ರೈ ಅಸೋಸಿಯೇಟ್ಸ್” ನೂತನ ವಕೀಲ ಕಚೇರಿ ಉದ್ಘಾಟನೆ

0

ಬೆಳ್ತಂಗಡಿ : ಬೆಂಗಳೂರು ರಾಜಧಾನಿಯ ಪ್ರಮುಖ ಬಡಾವಣೆಗಳಲ್ಲಿ ಒಂದಾದ ಬಸವೇಶ್ವರ ನಗರದ ಕೆ. ಹೆಚ್. ಬಿ. ಕಾಲೋನಿಯ “ಶ್ರೀಮುಡಿ ” ಕಟ್ಟಡದಲ್ಲಿ ಬೆಳ್ತಂಗಡಿಯ ಖ್ಯಾತ ನ್ಯಾಯವಾದಿ ಬಿ. ಕೆ. ಧನಂಜಯ ರಾವ್ ರವರ ಪುತ್ರ ಬಿ. ಕೆ. ಮಿಹಿರ್ ರಾವ್ ಮತ್ತು ಮಂಗಳೂರಿನ ಉದ್ಯಮಿ ರಾಜಾರಾಮ್ ರೈ ಯವರ ಪುತ್ರ ಪ್ರದ್ಯುಮ್ನ ರೈ ಇವರ ನೂತನ ಕಾನೂನು ಸಲಹಾ ಸಂಸ್ಥೆ ‘ರಾವ್ & ರೈ ಅಸೋಸಿಯೇಟ್ಸ್’ ಸುಸಜ್ಜಿತ ಕಚೇರಿ ಇತ್ತೀಚೇಗೆ ಶುಭಾರಂಭ ಗೊಂಡಿತು.

ಹೈಕೋರ್ಟ್‌ನ ಹಿರಿಯ ನ್ಯಾಯವಾದಿಗಳಾದ ಪ್ರಶಾಂತ್ ಬಿ. ಕೆ. ದೀಪ ಬೆಳಗಿಸುವ ಮೂಲಕ ಕಚೇರಿಯನ್ನು ಉದ್ಘಾಟಿಸಿ, ಸಂಸ್ಥೆಯ ಭವಿಷ್ಯದ ಕಾರ್ಯಗಳಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಕಾನೂನು ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ಪಾಲ್ಗೊಂಡು ಕಚೇರಿಯ ನೂತನ ಸೌಲಭ್ಯಗಳನ್ನು ವೀಕ್ಷಿಸಿ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬೆಂಗಳೂರಿನ ಜಿ. ಐ. ಆಟೋ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕ ಜಗದೀಶ್ ಮುಗುಳಿ, ಎ. ಬಿ. ಕಾರ್ಟರ್ ಪ್ರೈವೇಟ್ ಲಿಮಿಟೆಡ್ ಇದರ ನಿರ್ದೇಶಕ ಶ್ರೀವರ್ಮ ಶೆಟ್ಟಿ, ಬ್ಯಾಂಕ್ ಆಫ್ ಬರೋಡದ ಜನರಲ್ ಮೆನೇಜರ್ ರಾಜಗೋಪಾಲ್ ರೈ, ಬೆಳ್ತಂಗಡಿ ನ್ಯಾಯವಾದಿ ಧನಂಜಯ ರಾವ್ ಬಿ. ಕೆ., ರಾಜಶ್ರೀ ಧನಂಜಯ್ ರಾವ್, ಮಂಗಳೂರು ಉದ್ಯಮಿ ರಾಜರಾಮ ರೈ ಮತ್ತು ಪ್ರಶಾಂತಿ ರೈ, ಜ್ಯೋತಿ ಪ್ರತಾಪ್ ಸಿಂಹ ನಾಯಕ್, ಅನುಪಮ ನಾಯಕ್ ಇನ್ನಿತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here